ಮೈಸೂರು: ಅಕ್ರಮ ಮೀನುಗಾರರನ್ನು ಹಿಡಿಯಲು ಹೋಗಿ ಮೃತಪಟ್ಟ ಶಿವಕುಮಾರ್ ನಿವಾಸಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ, ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿದರು.
ಹೆಚ್.ಡಿ.ಕೋಟೆ ತಾಲೂಕಿನ ಬ್ರಹ್ಮಗಿರಿ ಹಾಡಿಯಲ್ಲಿರುವ ಶಿವಕುಮಾರ್ ಮನೆಗೆ ಭೇಟಿ ನೀಡಿದ ಅರಣ್ಯ ಸಚಿವ ಆನಂದ್ ಸಿಂಗ್, ಅರಣ್ಯಾಧಿಕರಾರಿಗಳಿಂದ ಹಾಗೂ ಹಾಡಿ ನಿವಾಸಿಗಳಿಂದ ಮಾಹಿತಿ ಪಡೆದರು. ನಂತರ ಗುಂಡ್ರೆ ಅರಣ್ಯ ಕಚೇರಿಗೆ ತೆರಳಿ, ಅಕ್ರಮ ಮೀನುಗಾರಿಕೆ ತಡೆಯಲು ಹೋದ ಮಹೇಶ್ ಮತ್ತು ಶಿವಕುಮಾರ್ ಮೃತಪಟ್ಟ ಘಟನೆಯ ಬಗ್ಗೆ ವಿವರಣೆ ಪಡೆದರು.
ಘಟನೆ ಕುರಿತಂತೆ 15 ದಿನದೊಳಗೆ ಸಂಪೂರ್ಣ ವರದಿ ನೀಡುವಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನ ನಿರ್ದೇಶಕರಿಗೆ ಸಚಿವರು ಸೂಚನೆ ನೀಡಿದರು.