ಮೈಸೂರು: ನಮ್ಮ ಇಲಾಖೆಗೆ ಸಂಬಂಧಿಸಿದ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ 3.50 ಕೋಟಿ ಹಣವನ್ನು ನೀಡಿರುವುದು ಅರಣ್ಯ ಇಲಾಖೆ ಸಚಿವನಾಗಿ ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಇದು ನನಗೆ ಮುಜುಗರ ಉಂಟುಮಾಡಿದೆ ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ 613 ಹೆಕ್ಟೇರ್ ನಲ್ಲಿರುವ ನೀಲಗಿರಿ ಮರಗಳಲ್ಲಿ 310 ಹೆಕ್ಟೇರ್ ನಷ್ಟು ಮರಗಳನ್ನು ತೆಗೆದು ಇನ್ನೊಂದು ವರ್ಷದಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸಭೆ ನಡೆಸಿ ನರೇಗಾ ಸಹಕಾರದಿಂದ ಈ ಕೆಲಸ ನಡೆಯಲಿದೆ ಎಂದು ವಿವರಿಸಿದರು.