ಮೈಸೂರು : ಪರಿಸರ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಅದರ ವಿನಾಶಕ್ಕೆ ಮುಂದಾಗಿದೆ. ಮರಗಳನ್ನು ಕಡಿಯಲು ಟೆಂಡರ್ ಕರೆದಿರುವ ಇಲಾಖೆ ಅಧಿಕಾರಿಗಳು, ಹೆಚ್ಚು ಬೆಲೆಬಾಳುವ ಮರಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಹಾಡಿ ಅರಣ್ಯ ಹಕ್ಕುಗಳ ಸಮಿತಿ ಆರೋಪಿಸಿದೆ.
ಹೆಚ್.ಡಿ.ಕೋಟೆ ತಾಲೂಕಿನ ಕೆ.ಎಡೆತೊರೆ ಗ್ರಾಮ ಪಂಚಾಯತ್‌ನ ಪ್ರಭಾನಗರ ಹಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಸಿಲ್ವರ್, ನೀಲಗಿರಿ, ನೇರಳೆ, ಬನ್ನಿ ಮರಗಳನ್ನು ಮಾರಾಟ ಮಾಡಲು ಟೆಂಡರ್ ಕರೆದಿತ್ತು.
ಆದರೆ, ಇಲಾಖೆ ಅಧಿಕಾರಿಗಳು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಟೆಂಡರ್ ಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಖಾತೆಗೆ ಹಾಕದೇ, ತನ್ನ ಖಾತೆಗೆ ಅರಣ್ಯ ಇಲಾಖೆ ಹಾಕಿಕೊಂಡಿದೆ.
₹1 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆಬಾಳುವ ಮರಗಳನ್ನು ಕೇವಲ ₹20 (ತಲಾ ಒಂದು ಮರಕ್ಕೆ) ಸಾವಿರಕ್ಕೆ ಗುತ್ತಿಗೆ ನೀಡಿದೆ ಎಂದು ಸಮಿತಿ ಆರೋಪಿಸಿದೆ.