ಮೈಸೂರು: ಕೊರೊನಾ ಲಾಕ್ಡೌನ್ ಹಿನ್ನೆಲೆ ಚಾಮುಂಡಿ ತಾಯಿಯ ದರ್ಶನ ಭಾಗ್ಯವಿಲ್ಲ. ಆದರೂ ತಾಯಿಯ ಹೆಸರಲ್ಲಿ ಅನ್ನ ದಾಸೋಹ ಮಾತ್ರ ಇಂದಿಗೂ ನಡೆಯುತ್ತಿದೆ.
ಆದರೆ, ದೇವಸ್ಥಾನದ ವತಿಯಿಂದ ನಡೆಯುತ್ತಿದ್ದ ದಾಸೋಹವನ್ನು ಈಗ ದೇವಸ್ಥಾನದ ಕೆಳಗೆ ಇರುವ ಪೂರ್ಣಯ್ಯ ಛತ್ರದಲ್ಲಿ ನಿರಾಶ್ರಿತರಿಗೆ ತಿಂಡಿ, ಊಟ ಸೇರಿದಂತೆ ಕಳೆದ 43 ದಿನಗಳಿಂದ ಪ್ರತಿದಿನ 2,000 ಜನರಿಗೆ ಊಟ ತಿಂಡಿ ವ್ಯವಸ್ಥೆಯನ್ನು ಜಿಲ್ಲಾಡಳಿತದ ಮನವಿಯ ಮೇರೆಗೆ ಕೊಡುತ್ತಾ ಬಂದಿದೆ. ಲಾಕ್ಡೌನ್ ಆದಾಗಿಂದ ಇಲ್ಲಿವರೆಗೆ 65ಸಾವಿರಕ್ಕೂ ಹೆಚ್ಚಿನ ಜನರಿಗೆ ಊಟ ತಿಂಡಿ ನೀಡಿದ್ದು,ಆ ಮೂಲಕ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿದ್ದ ದಾಸೋಹ ಇಲ್ಲಿಯೂ ಮುಂದುವರೆದಿದೆ ಎನ್ನುತ್ತಾರೆ ಮುಜರಾಯಿ ಇಲಾಖೆಯ ತಹಶೀಲ್ದಾರ್ ಯತಿರಾಜ್.