ETV Bharat / state

ಕೋವಿಡ್​​ ರೋಗಿಗಳ ಸಂಬಂಧಿಕರಿಗೆ ಆಹಾರ ವಿತರಿಸಲು ಶ್ರೀ ಗಣಪತಿ ಆಶ್ರಮ ನಿರ್ಧಾರ

ಕೋವಿಡ್ ಸೋಂಕಿತರ ಸಂಬಂಧಿಗಳಿಗೆ ಆಹಾರದ ಪೊಟ್ಟಣ ವಿತರಿಸಲು ಶ್ರೀ ಗಣಪತಿ ಆಶ್ರಮದಿಂದ ನಿರ್ಧರಿಸಲಾಗಿದೆ‌.

food distribution by shri ganapati ashrama
ಆಹಾರ ವಿತರಿಸಲು ಶ್ರೀ ಗಣಪತಿ ಆಶ್ರಮದಿಂದ ನಿರ್ಧಾರ
author img

By

Published : May 14, 2021, 1:51 PM IST

ಮೈಸೂರು: ಕೋವಿಡ್​ ಎಡರನೇ ಅಲೆ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿರುವ ಕೋವಿಡ್ ರೋಗಿಗಳ ಸಂಬಂಧಿಗಳಿಗೆ ಆಹಾರದ ಪೊಟ್ಟಣ ವಿತರಿಸಲು ಶ್ರೀ ಗಣಪತಿ ಆಶ್ರಮದಿಂದ ನಿರ್ಧರಿಸಲಾಗಿದೆ‌.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು, ಅನ್ನಪೂರ್ಣೇಶ್ವರಿ ಪ್ರತಿಮೆಗೆ ಪೂಜೆ ಮಾಡಿ, ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ‌.ರಾಮದಾಸ್ ಹಾಗೂ ಜನಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಆಹಾರದ ಪೊಟ್ಟಣ ವಿತರಿಸಿದರು. ಆಶ್ರಮದ ವತಿಯಿಂದ ನೀಡಲಾಗುವ ಆಹಾರದ ಪೊಟ್ಟಣವನ್ನು ಕೋವಿಡ್ ರೋಗಿಗಳಿಗೆ, ಸಂಬಂಧಿಗಳಿಗೆ ವಿತರಣೆ ಮಾಡುವಂತೆ ಮನವಿ ಮಾಡಿದರು.

ಆಹಾರ ವಿತರಿಸಲು ಶ್ರೀ ಗಣಪತಿ ಆಶ್ರಮದಿಂದ ನಿರ್ಧಾರ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕೊರೊನಾ ಎಂದು ಆತಂಕ ಪಡುವ ಬದಲು ಅದನ್ನು ನಿಯಂತ್ರಣ ಮಾಡಲು ಎಲ್ಲರೂ ಕೈ ಜೋಡಿಸಬೇಕು. ಸಾಂಕ್ರಾಮಿಕ ರೋಗ ದ್ವಾಪರ ಯುಗದಲ್ಲಿಯೂ ಇತ್ತು. ಅಂದು ಸಾಂಕ್ರಾಮಿಕ ರೋಗಗಳು ಹೋಗಿವೆ. ಇನ್ನು ಮುಂದೆ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದರು.

ಇದನ್ನೂ ಓದಿ: 'ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು'- ಸರ್ಕಾರದ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಶಾಸಕ‌ ಎಸ್.ಎ.ರಾಮದಾಸ್ ಮಾತನಾಡಿ, ಕೊರೊನಾ ರೋಗಿಗಳ‌ ಆಸ್ಪತ್ರೆಗಳ ಸಮೀಪ ಹೋಟೆಲ್​ಗಳು ಇರದೇ ಇರುವುದರಿಂದ ರೋಗಿಗಳನ್ನು ನೋಡಿಕೊಳ್ಳುತ್ತಿರುವ ಅವರ ಸಂಬಂಧಿಕರಿಗೆ ಊಟದ ಸಮಸ್ಯೆ ಎದುರಾಗಬಾರದು ಎಂದು ಆಶ್ರಮದ ವತಿಯಿಂದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.