ETV Bharat / state

ಮೈಸೂರು ಏರ್​ಪೋರ್ಟ್​ನಲ್ಲಿ ಪೈಲಟ್​ಗಳತ್ತ ಲೇಸರ್ ಲೈಟ್ ಬಿಡುವ ಕಿಡಿಗೇಡಿಗಳು: ದೂರು ದಾಖಲು - ಲೇಸರ್ ಲೈಟ್​

ಮೈಸೂರು ಏರ್​ಪೋರ್ಟ್​ನಲ್ಲಿ ವಿಮಾನ ಲ್ಯಾಂಡಿಂಗ್​​ ಮತ್ತು ಟೇಕ್ ಆಫ್​ ವೇಳೆ ಕೆಲವರು ಲೇಸರ್ ಲೈಟ್ಸ್​ ಬಿಡುತ್ತಿದ್ದು, ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

flashing-laser-lights-on-aircraft
ಪೈಲಟ್​ಗಳಿಗೆ ಲೇಸರ್ ಲೈಟ್​ ಹಾವಳಿ
author img

By ETV Bharat Karnataka Team

Published : Jan 4, 2024, 10:03 AM IST

Updated : Jan 4, 2024, 10:25 AM IST

ಮೈಸೂರು: ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ರಾತ್ರಿ ಸಂದರ್ಭ ವಿಮಾನ ಲ್ಯಾಂಡಿಂಗ್​​ ಮತ್ತು ಟೇಕ್ ಆಫ್​ ಆಗುವ ವೇಳೆ ಕಿಡಿಗೇಡಿಗಳು ಬಿಡುವ ಲೇಸರ್ ಲೈಟ್​ನಿಂದ ಪೈಲಟ್​ಗಳಿಗೆ ತೊಂದರೆಯಾಗುತ್ತಿದೆ ಎಂದು ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಲೇಸರ್ ಲೈಟ್​ನಿಂದ ಸಮಸ್ಯೆ ಉಂಟಾದ ಬಗ್ಗೆ ಮೈಸೂರು ವ್ಯಾಪ್ತಿಯಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್​ಗಳು ನಿಲ್ದಾಣದ ನಿರ್ದೇಶಕರ ಗಮನಕ್ಕೆ ತಂದಿದ್ದಾರೆ. ವಿಮಾನ ಲ್ಯಾಂಡಿಂಗ್​ ಹಾಗೂ ಟೇಕ್ ಆಫ್ ಮಾಡುವ ವೇಳೆ ಕಿಡಿಗೇಡಿಗಳು ಲೇಸರ್​​ ಲೈಟ್​ ಬಿಡುತ್ತಿದ್ದಾರೆ. ಇದರಿಂದ ಪೈಲಟ್​ಗಳಿಗೆ ಬಹಳ ಸಮಸ್ಯೆ ಆಗುತ್ತಿದೆ‌ ಎಂದು ದೂರಿನಲ್ಲಿ‌ ಉಲ್ಲೇಖಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುವ, ಹೈ ರೆಸಲ್ಯೂಷನ್​ ಇರುವ ನೀಲಿ ಲೇಸರ್​ ಲೈಟ್​ ಅನ್ನು ವಿಮಾನಗಳ ಕಡೆಗೆ ಬಿಡುತ್ತಾರೆ. ಇದರಿಂದ ಕಣ್ಣು ಬಿಡಲು ಆಗುವುದಿಲ್ಲ, ಅಲ್ಲದೆ ಕೆಲ ಸಮಯ ಏನೂ ಸಹ ಕಾಣುವುದಿಲ್ಲ. ಇದು ಪೈಲಟ್​ಗಳಿಗೆ ಸಮಸ್ಯೆಯಾಗಿದೆ. ರನ್​​ ವೇಯ ಎರಡು ಕಡೆಗಳಿಂದಲೂ, ಇಂತಹ ಸಮಸ್ಯೆ ಎದುರಾಗಿದೆ. ಮನೆಗಳ ಮಹಡಿ ಮೇಲಿಂದ ಮೋಜಿಗಾಗಿ‌ ಯಾರಾದರೂ ಈ ರೀತಿ ಉಪಟಳ ನೀಡುತ್ತಿದ್ದಾರೋ? ಅಥವಾ ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯ ಎಸಗುತ್ತಿದ್ದಾರೆಯೇ ಎಂಬುದು ತಿಳಿದಿಲ್ಲ. ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

'ಇದೊಂದು ಶಿಕ್ಷಾರ್ಹ ಅಪರಾಧವಾಗಿದೆ. ತೊಂದರೆ ಕೊಡುತ್ತಿರುವವರಿಗೆ ಇದರ ಅರಿವು ಇಲ್ಲದಂತಿದೆ. ಹೀಗಾಗಿ ಅನಿವಾರ್ಯವಾಗಿ ಪ್ರಾಧಿಕಾರದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಅಲ್ಲದೆ, ಈ ರೀತಿ ಲೇಸರ್​ ಲೈಟ್ ಬಿಡುವುದನ್ನು ಗಮನಿಸುವ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಬೇಕು' ಎಂದು ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಆರ್‌. ಅನೂಪ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಂಜನಗೂಡು ಬಂದ್​ಗೆ ಅನುಮತಿ ನೀಡಿಲ್ಲ: ತಹಶೀಲ್ದಾರ್ ಶಿವಪ್ರಸಾದ್ ಸ್ಪಷ್ಟನೆ

Last Updated : Jan 4, 2024, 10:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.