ETV Bharat / state

ಇಡೀ ಅಂಗಡಿಯನ್ನೇ ಸುಟ್ಟ ಗಂಧದಕಡ್ಡಿ ಕಿಡಿ: ದೇವರಾಜ ಮಾರುಕಟ್ಟೆಯಲ್ಲಿ ಅವಘಡ

ಪೂಜಾ ಸಾಮಗ್ರಿ ಮಾರುವ ಅಂಗಡಿಯಲ್ಲಿ ಹತ್ತಿದ್ದ ಗಂಧದ ಕಡ್ಡಿ ಕಿಡಿ ಆಕಸ್ಮಿಕವಾಗಿ ಬಿದ್ದು, ಇಡೀ ಅಂಗಡಿಯೇ ಹೊತ್ತಿ ಉರಿದ ಘಟನೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.

ಅಂಗಡಿ ಸುಟ್ಟು ಭಸ್ಮ
author img

By

Published : Aug 12, 2019, 5:17 PM IST

ಮೈಸೂರು: ಗಂಧದ ಕಡ್ಡಿ ಕಿಡಿಯಿಂದ ಅಂಗಡಿಯೇ ಸುಟ್ಟು ಹೋದ ಘಟನೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.

ದೇವರಾಜ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ

ನಗರದ ದೇವರಾಜ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಮಾರುವ ಅಂಗಡಿಯಲ್ಲಿ ಹತ್ತಿದ್ದ ಗಂಧದ ಕಡ್ಡಿ ಕಿಡಿ ಆಕಸ್ಮಿಕವಾಗಿ ಬಿದ್ದು, ಇಡೀ ಅಂಗಡಿಯೇ ಹೊತ್ತಿ ಉರಿದಿದೆ. ಈ ಬೆಂಕಿ ಅಕ್ಕಪಕ್ಕದ ಎರಡು ಮಳಿಗೆಗಳನ್ನು ಆವರಿಸಿದ್ದು, ಆ ಅಂಗಡಿಗಳು ಸಹ ಭಾಗಶಃ ಹಾನಿಗೊಳಗಾಗಿವೆ.

ಆಗ್ನಿಶಾಮಕ ಸಿಬ್ಬಂದಿ ಬಂದರೂ, ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ಹೋಗಲು ಇಕ್ಕಟ್ಟಾದ ಜಾಗವಿದ್ದ ಕಾರಣ ತಕ್ಷಣ ಹೋಗಲಾಗಲಿಲ್ಲ. ಅಷ್ಟೊತ್ತಿಗೆ 1 ಅಂಗಡಿ ಸಂಪೂರ್ಣ ಸುಟ್ಟುಹೋಗಿದೆ. ಆದರೂ ಆಗ್ನಿಶಾಮಕ ವಾಹನ ಹೆಚ್ಚಿನ ಅನಾಹುತ ಆಗದ ರೀತಿ ಅಪಾಯ ತಪ್ಪಿಸಿದೆ. 100 ವರ್ಷ ಹಳೆಯದಾದ ಈ ಪಾರಂಪರಿಕ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವುದು ಘಟನೆಗೆ ಕಾರಣ ಎನ್ನುತ್ತಾರೆ ಸ್ಥಳೀಯ ವರ್ತಕರು.

Intro:ಮೈಸೂರು: ಗಂಧದ ಕಡ್ಡಿ ಕಿಡಿಯಿಂದ ಈಡಿ ಅಂಗಡಿಯೇ ಸುಟ್ಟು ಹೋದ ಘಟನೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದ್ದು ಸ್ಥಳಕ್ಕೆ ಆಗ್ನಿಶಾಮಕ ದಳ ದೌಡಾಯಿಸಿದೆ.
Body:

ನಗರದ ದೇವರಾಜ ಮಾರುಕಟ್ಟೆಯಲ್ಲಿ ಇರುವ ಪೂಜಾ ಸಾಮಗ್ರಿ ಮಾರುವ ಅಂಗಡಿಯಲ್ಲಿ ಹತ್ತಿಸಿದ್ದ ಗಂಧದ ಗಡ್ಡಿ ಕಿಡಿ ಆಕಸ್ಮಿಕವಾಗಿ ಬಿದ್ದು ಈಡಿ ಅಂಗಡಿಯೇ ಹೊತ್ತಿ ಉರಿದಿದ್ದು ಈ ಬೆಂಕಿ ಅಕ್ಕಪಕ್ಕದ ಎರಡು ಮಳಿಗೆಗಳನ್ನು ಆವರಿಸಿದ್ದು ಆ ಅಂಗಡಿಗಳು ಸಹ ಭಾಗಶಃ ಹಾನಿಗೊಳಗಾಗಿವೆ. ತಕ್ಷಣ ಆಗಮಿಸಿದ ಆಗ್ನಿಶಾಮಕ ವಾಹನಗಳು ಬೆಂಕಿ ಹೊತ್ತುಕೊಂಡ ಸ್ಥಳಕ್ಕೆ ಹೋಗಲು ಇಕ್ಕಟ್ಟಾದ ಕಾರಣ ಅಷ್ಟೊತ್ತಿಗೆ ೧ ಅಂಗಡಿ ಸಂಪೂರ್ಣ ಸುಟ್ಟುಹೋಗಿದೆ. ಆದರೂ ಆಗ್ನಿಶಾಮಕ ವಾಹನ ಹೆಚ್ಚಿನ ಅನಾಹುತ ಆಗದ ರೀತಿ ಅಪಾಯ ತಪ್ಪಿಸಿದೆ.
೧೦೦ ವರ್ಷ ಹಳೆಯದಾದ ಈ ಪಾರಂಪರಿಕ ಕಟ್ಟಡ ಶಿಥಿಲವ್ಯಸ್ಥೆಯಲ್ಲಿ ಇರುವುದು ಘಟನೆಗೆ ಕಾರಣ ಎನ್ನುತ್ತಾರೆ ಸ್ಥಳೀಯ ವರ್ತಕರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.