ETV Bharat / state

ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ: ಡಿಸಿಎಂ ಲಕ್ಷ್ಮಣ​​​ ಸವದಿ - Traffic violation

ಸಂಚಾರ ನಿಯಮ ಉಲ್ಲಂಘನೆಗೆ ಸರ್ಕಾರದ ಆದೇಶದಂತೆ ದಂಡ ವಿಧಿಸಲಾಗುತ್ತಿದೆ. ರಸ್ತೆ ಗುಂಡಿಗೂ ದಂಡಕ್ಕೂ ಸಂಬಂಧವಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಎಂ.ಲಕ್ಷ್ಮಣ ಸವದಿ ಹೇಳಿದ್ದಾರೆ.

ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ: ಡಿಸಿಎಂ ಲಕ್ಷ್ಮಣ್ ಸವದಿ
author img

By

Published : Sep 8, 2019, 5:34 PM IST

ಮೈಸೂರು: ಸಂಚಾರ ನಿಯಮ ಉಲ್ಲಂಘನೆಗೆ ಸರ್ಕಾರದ ಆದೇಶದಂತೆ ದಂಡ ವಿಧಿಸಲಾಗುತ್ತಿದೆ. ರಸ್ತೆ ಗುಂಡಿಗೂ ದಂಡಕ್ಕೂ ಸಂಬಂಧವಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಎಂ.ಲಕ್ಷ್ಮಣ ಸವದಿ ಹೇಳಿದ್ದಾರೆ.

ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ, ಸಚಿವನಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ಪಕ್ಷದ ವರಿಷ್ಠರು ಹಲವು ದೂರ ದೃಷ್ಟಿಯಿಂದ ನನಗೆ ಅಧಿಕಾರ ನೀಡಿದ್ದಾರೆ. ಅದು ಯಾವ ಕಾರಣಕ್ಕೆ ಅನ್ನೋದು ನನಗೆ ಗೊತ್ತಿಲ್ಲ. ಇದು ಬಯಸದೇ ಬಂದ ಭಾಗ್ಯ. ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ. 6ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಇನ್ನು, ಕೇಂದ್ರ ಸರ್ಕಾರ ದಂಡದ ಮೊತ್ತ ಹೆಚ್ಚಿಸಿದೆ. ದೇಶಾದ್ಯಂತ ಪರಿಷ್ಕೃತ ದಂಡ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ರಸ್ತೆಯ ದುಸ್ಥಿತಿಗೂ, ದಂಡಕ್ಕೂ ಸಂಬಂಧವಿಲ್ಲ. ರಸ್ತೆ ರಿಪೇರಿ ಮಾಡಿಸಬೇಕಾದದ್ದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿಯ ಕೆಲಸ. ರಸ್ತೆ ಸರಿ ಇಲ್ಲ ಅಂತ ದಂಡ ಹಾಕದೇ ಇರಲು ಸಾಧ್ಯವಿಲ್ಲ ಎಂದರು.

ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿಯವರನ್ನ ಭೇಟಿ ಮಾಡಿ ಮಾತನಾಡಿದ್ದಾರೆ. ಆದಷ್ಟು ಬೇಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗಲಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ನೆರೆ ಪರಿಹಾರ ಘೋಷಣೆ ಮಾಡಿದ್ದಾರೆ ಅನ್ನೋ ವಿಚಾರವನ್ನ ಪ್ರಧಾನಿಗಳು ಎಲ್ಲೆಂದರಲ್ಲೇ ಬಹಿರಂಗವಾಗಿ ಘೋಷಣೆ ಮಾಡೋಕೆ ಆಗುತ್ತಾ‌ ಎಂದು‌ ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್ ಸಂಚಾರ ಜಾರಿಗೆ ತರುವ ಚಿಂತನೆ ನಡೆದಿದ್ದು, ಹೊರದೇಶಗಳಿಂದ ಪ್ರಪೋಸಲ್ ಬಂದಿದೆ. ಶೂನ್ಯ ಬಂಡವಾಳ ಹೂಡಿಕೆ ಮಾಡಿ ಶೇ. 40, 60ರಂತೆ ಆದಾಯದಲ್ಲಿ ನಮಗೆ ಕೊಡ್ತಾರೆ. ಬಸ್​ಗಳನ್ನು ಅವರೇ ಸಂಪೂರ್ಣವಾಗಿ ಮೆಂಟೇನ್​ ಮಾಡ್ತಾರೆ. ಈ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಈ ಯೋಜನೆಯನ್ನು ಚಾಲ್ತಿಗೆ ತರಲು ಮುಂದಾಗಿದ್ದಾರೆ ಎಂದರು.

ಮೊದಲು ಅಸ್ಸಾಂನಲ್ಲಿ ಜಾರಿಗೆ ಬರಲಿದ್ದು, ಅದನ್ನು ನಾವು ಪರಿಗಣೆನೆಗೆ ತೆಗೆದುಕೊಂಡು ಯೋಜನೆ ಜಾರಿ ಬಗ್ಗೆ ನಿರ್ಧಾರ ಮಾಡುತ್ತೇವೆ. ತೈಲ ಬೆಲೆ ಹೆಚ್ಚಳ ಹಿನ್ನೆಲೆ, ಬಸ್ ದರ ಏರಿಸುವ ಪ್ರಪೋಸಲ್ ನನ್ನ ಮುಂದೆ ಇದೆ. ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳದ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.

Intro:ಡಿಸಿಎಂBody:ರಸ್ತೆಗೆ ದಂಡಕ್ಕೂ ಸಂಬಂಧವಿಲ್ಲ: ಡಿಸಿಎಂ‌ ಲಕ್ಷ್ಮಣ್ ಎಂ.ಸವದಿ
ಮೈಸೂರು: ಸಂಚಾರ ನಿಯಮ ಉಲ್ಲಂಘನೆಗೆ ಸರ್ಕಾರದ ಆದೇಶದಂತೆ ದಂಡ ವಿಧಿಸಲಾಗುತ್ತಿದೆ.ರಸ್ತೆಗೂ ಗುಂಡಿಗೂ- ದಂಡಕ್ಕೂ ಸಂಬಂಧವಿಲ್ಲಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ‌.
ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕೇಂದ್ರ ಸರ್ಕಾರ ದಂಡದ ಮೊತ್ತ ಹೆಚ್ಚಿಸಿದೆ.ದೇಶಾದ್ಯಂತ ಪರಿಷ್ಕೃತ ದಂಡ ವಸೂಲಾತಿ ಪ್ರಕ್ರಿಯೆ ಪ್ರಾರಂಭ ಆಗಿದೆ.ರಸ್ತೆಗೂ ದಂಡಕ್ಕೂ ಸಂಬಂಧ ಇಲ್ಲ.ರಸ್ತೆ ರಿಪೇರಿ ಮಾಡಿಸಬೇಕಾದದ್ದು ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಕೆಲಸ
.ರಸ್ತೆ ಸರಿ ಇಲ್ಲ ಅಂತ ದಂಡ ಹಾಕದೆ ಇರಲು ಸಾಧ್ಯವಿಲ್ಲ ಎಂದರು.

ಡಿಸಿಎಂ ಸಚಿವನಾದ ಮೇಲೆ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ.ಪಕ್ಷದ ವರಿಷ್ಠರು ಹಲವು ದೂರುದೃಷ್ಟಿಯಿಂದ ಅಧಿಕಾರ ನೀಡಿದ್ದಾರೆ.ಅದು ಯಾವ ಕಾರಣ ಅನ್ನೋದು ನನಗೆ ಗೊತ್ತಿಲ್ಲ.ಇದು ಬಯಸದೇ ಬಂದ ಭಾಗ್ಯ.ಮಹಾರಾಷ್ಟ್ರದಲ್ಲಿ ಚುನಾವಣೆ ವಿಚಾರ.
ಹೌದು ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ.6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಪ್ರತಿಪಕ್ಷಗಳಿಂದ ಸವದಿ ಬಗ್ಗೆ ಟೀಕೆ ವಿಚಾರ ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ.ಅದಕ್ಕಾಗಿ ಅವರು ಮಾತನಾಡುತ್ತಿದ್ದಾರೆ.ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಭಿನ್ನಾಭಿಪ್ರಾಯ ‌ಇಲ್ಲ ಎಂದರು.

ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರದ ಸಂಬಂದ ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿಗಳ ಜತೆ ಮಾತನಾಡಿದ್ದಾರೆ.ಆದಷ್ಟು ಬೇಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಪ್ರಧಾನಿಗಳು ರಾಜ್ಯಕ್ಕೆ ಬಂದು ನೆರೆ ಪರಿಹಾರ ಘೋಷಣೆ ಮಾಡಿದ್ದಾರೆ ಅನ್ನೋ ವಿಚಾರಪ್ರಧಾನಿಗಳು ಎಲ್ಲೆಂದರಲ್ಲೇ ಬಹಿರಂಗವಾಗಿ ಘೋಷಣೆ ಮಾಡೋಕ್ಕೆ ಆಗುತ್ತಾ‌ ಎಂದು‌ ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್ ಸಂಚಾರ ಜಾರಿಗೆ ತರುವ ಚಿಂತನೆ ನಡೆದಿದೆ.ಹೊರದೇಶಗಳಿಂದ ಪ್ರಪೋಸಲ್ ಬಂದಿದೆಶೂನ್ಯ ಬಂಡವಾಳ ಹೋಡಿಕೆ ಮಾಡಿ ಶೇಕಡ 40% 60 %ರಂತೆ ಆದಾಯದಲ್ಲಿ ನಮಗೆ ಕೊಡ್ತಾರೆ.ಬಸ್ ಗಳನ್ನು ಅವರೆ ಸಂಪೂರ್ಣವಾಗಿ ಮೇಂಟೇನ್ ಮಾಡ್ತಾರೆಈ ಬಗ್ಗೆ ಈಗಾಗಲೇ ಚರ್ಚೆಯನ್ನು ಮಾಡಲಾಗಿದೆ
ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಇಂತ ಯೋಜನೆ ಚಾಲ್ತಿಗೆ ಮುಂದಾಗಿದ್ದಾರೆ ಎಂದರು.

ಮೊದಲು ಅಸ್ಸಾಂನಲ್ಲಿ ಜಾರಿಗೆ ಬರಲಿದ್ದು.ಅದನ್ನು ನಾವು ಪರಿಗಣೆನೆಗೆ ತೆಗೆದುಕೊಂಡು ಯೋಜನೆ ಜಾರಿ ಬಗ್ಗೆ ನಿರ್ಧಾರ ಮಾಡ್ತಿವಿ.ತೈಲ ಬೆಲೆ ಹೆಚ್ಚಳ ಹಿನ್ನೆಲೆ ಬಸ್ ದರ ಏರಿಸುವ ಪ್ರಪೂಸಲ್ ನನ್ನ ಮುಂದೆ ಇದೆ
ಸದ್ಯಕ್ಕೆ ಬಸ್ ಟಿಕೇಟ್ ದರ ಹೆಚ್ಚಳದ ಉದ್ದೇಶ ಇಲ್ಲ.ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.Conclusion:ಡಿಸಿಎಂ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.