ಮೈಸೂರು: ಗಡಿಗಾಗಿ ಎರಡು ಕೇರೆ ಹಾವುಗಳು ಫೈಟ್ ಮಾಡುತ್ತಿದ್ದು, ಅವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ವಾಗ್ದೇವಿ ನಗರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ರವೀಂದ್ರ ತಮ್ಮ ನಿವಾಸದ ಮುಂದೆ ಇರುವ ಮೋರೆಯನ್ನ ಸ್ವಚ್ಛ ಮಾಡಲು ಮುಂದಾದಾಗ ಹಾವುಗಳನ್ನು ನೋಡಿದ್ದಾರೆ. ಕೂಡಲೇ ಅವರು ಸ್ನೇಕ್ ಕೀರ್ತಿಗೆ ಕರೆ ಮಾಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಕೀರ್ತಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಈ ಕೇರೆ ಹಾವುಗಳು ಮಿಲನ ಮಾಡುತ್ತಿಲ್ಲ. ಗಡಿಗಾಗಿ ಹೋರಾಟ ಮಾಡುತ್ತಿವೆ ಎಂದು ಸ್ನೇಕ್ ಕೀರ್ತಿ ಮನೆಯ ಮಾಲೀಕರಿಗೆ ಮನವರಿಕೆ ಮಾಡಿದ್ದಾರೆ.
ಸೆರೆ ಹಿಡಿದ ಎರಡು ಹಾವುಗಳನ್ನು ಸ್ನೇಕ್ ಕೀರ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.