ETV Bharat / state

ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ತಲೆಬಾಗುತ್ತೇವೆ: ಫಾದರ್ ಡಾ‌‌. ಕೆ.ವಿಲಿಯಂ - ಫಾದರ್ ಡಾ‌‌.ಕೆ.ವಿಲಿಯಂ

ಡಿ. 24ರ ರಾತ್ರಿಯಿಂದ ಸಂತ ಫಿಲೋಮಿನಾ ಚರ್ಚ್​ನಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಆರಂಭಿಸಲಾಗುವುದು. ಡಿ. 25ರಂದು ಕೂಡ ಪ್ರತಿ ಒಂದು ಗಂಟೆಗೊಮ್ಮೆ ಪೂಜೆ ನಡೆಸಲಾಗುವುದು.‌ ಆದರೆ ಈ ಸಂದರ್ಭ ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ಫಾದರ್​ ತಿಳಿಸಿದರು.

Father Dr. k william
ಫಾದರ್ ಡಾ‌‌.ಕೆ.ವಿಲಿಯಂ
author img

By

Published : Dec 23, 2020, 8:12 PM IST

ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಜಾರಿಯಾದರೆ ಸರ್ಕಾರದ ಆದೇಶಕ್ಕೆ ತಲೆಬಾಗಿ ಕ್ರಿಸ್​ಮಸ್ ಹಬ್ಬವನ್ನು ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಣೆ ಮಾಡುತ್ತೇವೆ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ‌. ಕೆ.ವಿಲಿಯಂ ಹೇಳಿದರು.

ಚರ್ಚ್​ನಲ್ಲಿ ಕ್ರಿಸ್​ಮಸ್​ ಹಬ್ಬದ ಆಚರಣೆ ಕುರಿತು ಮಾತನಾಡಿದ ಫಾದರ್ ವಿಲಿಯಂ

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ. 24ರ ರಾತ್ರಿಯಿಂದ ಸಂತ ಫಿಲೋಮಿನಾ ಚರ್ಚ್​ನಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಆರಂಭಿಸಲಾಗುವುದು. ಡಿ. 25ರಂದು ಕೂಡ ಪ್ರತಿ ಒಂದು ಗಂಟೆಗೊಮ್ಮೆ ಪೂಜೆ ನಡೆಸಲಾಗುವುದು.‌ ಚರ್ಚ್​ ಒಳಗೆ ಒಂದು ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದೆ. ಆದರೆ ಈ ಬಾರಿ 250 ಮಂದಿ ಮಾತ್ರ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗುವುದು. ಆನ್​ಲೈನ್​ನಲ್ಲಿ ಪೂಜಾ ಕೈಂಕರ್ಯ ನೇರ ಪ್ರಸಾರ ಮಾಡಲಾಗುವುದು ಎಂದರು.

ಇದನ್ನೂ ಓದಿ: ಬ್ರಿಟನ್‌ನಿಂದ ಮೈಸೂರಿಗೆ 137 ಜನರ ಆಗಮನ.. ಎಲ್ಲರ ಕೋವಿಡ್ ಪರೀಕ್ಷೆಗೆ ಕ್ರಮ

ಸಿಬ್ಬಂದಿಗೆ ಶೇ. 75 ಸಂಬಳ:

ಮೈಸೂರು ಪ್ರಾಂತ್ಯದಲ್ಲಿ 153 ಶಾಲಾ-ಕಾಲೇಜುಗಳಲ್ಲಿ 2300ಕ್ಕೂ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಕೊರೊನಾ ನಡುವೆಯೂ ಸಿಬ್ಬಂದಿಗೆ ಶೇ‌. 75ರಷ್ಟು ಸಂಬಳ ನೀಡಲಾಗುತ್ತಿದೆ. ನಮ್ಮ ಟ್ರಸ್ಟ್ ನಡೆಸುತ್ತಿರುವ ಶಾಲೆ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರ ಮೇಲೆ ಶುಲ್ಕ ಕಟ್ಟುವಂತೆ ಒತ್ತಡ ಹೇರಿಲ್ಲ. ಬ್ಯಾಂಕ್​ನಿಂದ ಸಾಲ ಪಡೆದು ಸಂಬಳ ನೀಡಲಾಗುತ್ತಿದೆ ಎಂದು ಹೇಳಿದರು.

ಲವ್ ಜಿಹಾದ್ ಇಲ್ಲ:

ನಮ್ಮ ಧರ್ಮದಲ್ಲಿ ಅಂತರ್ಜಾತಿ ವಿವಾಹವಾದರೆ ಅವರವರ ಸಂಪ್ರದಾಯಕ್ಕೆ ಗೌರವ ಕೊಡುತ್ತಾರೆ. ಲವ್ ಜಿಹಾದ್ ನಮ್ಮಲ್ಲಿ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.