ETV Bharat / state

ವಿಶ್ವ ವ್ಯಾಪಾರ ಒಪ್ಪಂದದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ: ಕುರುಬೂರು ಶಾಂತಕುಮಾರ್ - etv bharat kannada

ಕೃಷಿ ಉತ್ಪನ್ನಗಳಾದ ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್​ಟಿಯನ್ನು ರದ್ದುಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

farmers-are-in-trouble-for-world-trade-agreement-says-kuruburu-shanthakumar
ವಿಶ್ವ ವ್ಯಾಪಾರ ಒಪ್ಪಂದದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ: ಕುರುಬೂರು ಶಾಂತಕುಮಾರ್
author img

By

Published : Jul 4, 2023, 3:34 PM IST

ಮೈಸೂರು: ಚೀನಾ ರೇಷ್ಮೆ, ಮಲೇಷ್ಯಾದ ಪಾಮ್ ಆಯಿಲ್ ಅಮದು ನೀತಿ ದೇಶದ ಕೊಬ್ಬರಿ ಹಾಗೂ ರೇಷ್ಮೆ ಬೆಳೆಗಾರರನ್ನು ಬೆಲೆ ಕುಸಿತದಿಂದ ಕಂಗಾಲು ಮಾಡಿದೆ. ವಿಶ್ವ ವ್ಯಾಪಾರ ಒಪ್ಪಂದ ಪರಿಣಾಮ ರೈತರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದರ ಅವರು, ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದ ನೀತಿಯಿಂದಾಗಿ ಮಲೇಷ್ಯಾದ ಪಾಮೊಲಿನ್ ಎಣ್ಣೆ ಹಾಗೂ ಚೀನಾ ದೇಶದಿಂದ ರೇಷ್ಮೆ ಆಮದು ಮಾಡಿಕೊಂಡು. ಸುಂಕವನ್ನ ವಿನಾಯಿತಿ ಗೂಳಿಸಿದ ಪರಿಣಾಮ ತೆಂಗಿನ ಹಾಗೂ ರೇಷ್ಮೆ ಗೂಡು ಬೆಲೆ ಅರ್ಧದಷ್ಟು ಕುಸಿತವಾಗಿದೆ ಎಂದರು.

ಕೂಡಲೇ ತೆಂಗು ಹಾಗೂ ರೇಷ್ಮೆ ಬೆಳೆ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸದ್ಯದಲ್ಲಿಯೇ ಈ ಬಗ್ಗೆ ರೈತ ಸಮಾವೇಶ ನಡೆಸಿ, ರೈತರ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಬರಗಾಲದ ಛಾಯೆ ಮೂಡುತ್ತಿದೆ, ಜಲಾಶಯಗಳು ಖಾಲಿಯಾಗುತ್ತಿವೆ. ಕೆರೆಕಟ್ಟೆಗಳು ಒಣಗುತ್ತಿವೆ ಕುಡಿಯುವ ನೀರಿಗೂ ಬರಗಾಲದ ಉಂಟಾಗಿದೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬರಗಾಲ ಘೋಷಣೆ ಮಾಡಿ, ಜನ ಜಾನುವಾರುಗಳು ಹಾಗೂ ರೈತರ ಬೆಳೆಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಆಹಾರ ಭದ್ರತೆ ಕಾಯ್ದೆ ಅನ್ಯಾಯ, ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಅಕ್ಕಿ, ರಾಗಿ ಜೋಳ ಸಿರಿಧಾನ್ಯಗಳನ್ನು ಖರೀದಿಸಿ ಎಂಎಸ್‌ಪಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಿ ಖರೀದಿಸಬೇಕು. ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್​ಟಿ ರದ್ದುಗೊಳಿಸಬೇಕು. ಜೂಜಾಟ ಆಟ, ಕುದುರೆ ರೇಸ್ ಬೆಟ್ಟಿಂಗ್​, ಕ್ಯಾಸಿನೂಗಳಿಗೆ ಜಿಎಸ್‌ಟಿ ಇಲ್ಲ, ರೈತರಿಗೆ ಯಾಕೆ? ಎಂದು ಪ್ರಶ್ನಿಸಿದರು.

ಕೃಷಿ ಸಾಲ ನೀತಿ ಬದಲಾವಣೆ ಮಾಡಬೇಕು: ಪ್ರಸಕ್ತ ಕೃಷಿ ರೈತರ ಸಾಲ ನೀತಿ ಬದಲಾಯಿಸಿ. ಕೃಷಿ ಭೂಮಿ ಮೌಲ್ಯದ ಶೇಕಡ 75ರಷ್ಟು ಸಾಲ ನೀಡುವಂತೆ ನೀತಿ ರೂಪಿಸಿ. ಕೃಷಿ ಸಾಲಕ್ಕೆ ಸಿಬಿಲ್​ ನೀತಿ ಕೈಬಿಡಬೇಕು. ಕಬ್ಬಿನ ಎಫ್​ಆರ್​ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು, ಸಾಗಾಣಿಕೆ ಸುಲಿಗೆ ತಪ್ಪಿಸಲು ಅತ್ಯವಶ್ಯಕ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತೆ ಕಾನೂನು ಜಾರಿ ತರಬೇಕು. ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನ ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮಾದರಿಯಲ್ಲಿ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಸಕಾಲಕ್ಕೆ ತೆರೆಯುವಂತಾಗಬೇಕು. ಖರೀದಿಸಿದ ಉತ್ಪನ್ನಗಳಿಗೆ ಒಂದು ವಾರದಲ್ಲಿ ರೈತರಿಗೆ ಹಣ ಪಾವತಿ ಮಾಡುವಂತಾಗಬೇಕು ಎಂದರು.

ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಪಸಲ್ ಬಿಮಾ ಬೆಳೆ ವಿಮೆ ಜಾರಿ ಮಾಡಬೇಕು. ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ವಾಣಿಜ್ಯ ಬೆಳೆ ಅಡಿಕೆಗೆ ಬೆಳೆಗೆ ವಿಮೆ ಜಾರಿ ಮಾಡಿರುವಂತೆ ಕಬ್ಬು, ಬಾಳೆ ಬೆಳೆಗೂ ವಿಮೆ ಜಾರಿ ಮಾಡಬೇಕು. ಅತಿವೃಷ್ಟಿ - ಅನಾವೃಷ್ಟಿ ಆಕಸ್ಮಿಕ ಬೆಂಕಿ, ಪ್ರವಾಹದ ಹಾನಿಯಿಂದ ಉಂಟಾಗುವ ಬೆಳೆ ನಾಶದ ಪರಿಹಾರಕ್ಕೆ ಸಂಬಂಧಿಸಿದಂತೆ ಮಾನದಂಡ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಯೊಂದು ರೈತ ಕುಟುಂಬಕ್ಕೂ, ಕೃಷಿ ಕಾರ್ಮಿಕರಿಗೂ ತೆಲಂಗಾಣ ಮಾದರಿಯಲ್ಲಿ 5 ಲಕ್ಷ ರೂಪಾಯಿಗಳ ಜೀವವಿಮೆ ಯೋಜನೆ ಜಾರಿಗೆ ತನ್ನಿ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದುಗೊಳಿಸ ಬೇಕು. ಗೋ ಹತ್ಯೆ ನಿಷೇಧ ಕಾನೂನು ಉಳಿಸಲಿ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಗೌರವಿಸಲಿ ಕೆಲವು ತಿದ್ದುಪಡಿಗಳನ್ನು ಮಾಡಲಿ ಎಂದು ಅವರು ಹೇಳಿದರು.

ಜೊತೆಗೆ ಕಾಡಂಚಿದಲ್ಲಿ ರೈತರಿಗೆ ಪ್ರಾಣಿಗಳ ಹಾವಳಿ ಪ್ರಾಣ ಹಾನಿ ತಪ್ಪಿಸಲು. ಕಾಡಿನ ಒಳಗೆ ಇರುವ ಎಲ್ಲಾ ಮೋಜಿನ ತಾಣಗಳು. ರೆಸಾರ್ಟ್ ಗಳನ್ನ ಮುಚ್ಚಿಸಬೇಕು ಕಾಡಿನ ಒಳಗೆ ಗಣಿಗಾರಿಕೆ ನಿಲ್ಲಿಸಬೇಕು. ಕೃಷಿ ಪಂಪ್ ಸೆಟ್​ಗಳಿಗೆ ಹಗಲು ವೇಳೆಯಲ್ಲಿ ನಿರಂತರ 12 ಗಂಟೆಗಳ ವಿದ್ಯುತ್ ನೀಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಬಜೆಟ್​ನಲ್ಲಿ ಗಂಭೀರವಾಗಿ ಗಮನ ಹರಿಸುವಂತೆ ಒತ್ತಾಯಿಸುತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:'29 ಲಕ್ಷ ಟನ್ ಅಕ್ಕಿ ಎಥೆನಾಲ್ ಉತ್ಪಾದನೆಗೆ ನೀಡಿದ ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯಿಂದ ಮಹಾ ಪಾಪ': ವೀರಪ್ಪ ಮೊಯ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.