ಮೈಸೂರು: ರೈತರ ಬಗ್ಗೆ ನಿರ್ಲಕ್ಷ್ಯ ತೋರುವ ಸಂಸದ ಪ್ರತಾಪಸಿಂಹ ಅವರು ಅವಿವೇಕಿ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಜಿ.ಪಂ ಸಭಾಂಗಣದ ಮುಂಭಾಗ ನಡೆದಿದೆ.
2021-22 ನೇ ಸಾಲಿನ ಜಲವರ್ಷದ ಕಬಿನಿ ನೀರಾವರಿ ಸಲಹಾ ಸಮಿತಿ ಸಭೆಗೆ ರೈತ ಮುಖಂಡರನ್ನು ಆಹ್ವಾನಿಸದ ಹಿನ್ನೆಲೆಯಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ಮಾಡಿದ ರೈತ ಮುಖಂಡರು, ಅವಿವೇಕಿಗಳನ್ನು ಗೆಲ್ಲಿಸಿಕೊಂಡು ಸಭೆ ಮಾಡಿದರೆ ಪ್ರಯೋಜನವಿಲ್ಲ. ರೈತರನ್ನು ಸಭೆಗೆ ಕರೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಿವೇಕಿ ಎಂದಾಕ್ಷಣ ಮಧ್ಯಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ, ಜನಪ್ರತಿನಿಧಿಗಳನ್ನು ಅವಿವೇಕಿ ಎಂದು ಕರೆಯಬೇಡಿ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಜನಪ್ರತಿನಿಧಿಗಳು ವಿವೇಕದಿಂದ ಇದ್ದರೆ ನಾವೇಕೆ ಅವಿವೇಕಿಗಳೆಂದು ಹೇಳುತ್ತಿದ್ದೆವು ಎಂದರು. ನಂತರ ಅವಿವೇಕಿ ಸಂಸದ ಪ್ರತಾಪ್ ಸಿಂಹ ಎಂದು ಕೂಗುತ್ತಲೇ ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸ್ವಲ್ಪ ಸಮಯದವರೆಗೆ ಬಸ್ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ