ಮೈಸೂರು : ಕೌಟುಂಬಿಕ ಕಲಹದಿಂದ ಬೇಸತ್ತ ವಿವಾಹಿತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ವೆಂಕಟಗಿರಿ ಬಡಾವಣೆಯ ನಿವಾಸಿ ಉಮೇಶ್ (24) ಮೃತ ದುರ್ದೈವಿ. ಈತ ಒಂದೂವರೆ ವರ್ಷದ ಹಿಂದೆ ಟಿ.ನರಸೀಪುರ ತುಂಬಲ ಗ್ರಾಮದ ಅಪ್ರಾಪ್ತೆಯನ್ನ ಪ್ರೀತಿಸಿ ಮದುವೆಯಾಗಿದ್ದ. ಈ ವಿಚಾರವಾಗಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಒಂದು ಮಗುವಿನ ತಂದೆಯಾದರೂ, ಸಂಸಾರದ ಜವಾಬ್ದಾರಿ ಹೊರುವಲ್ಲಿ ಉಮೇಶ್ ವಿಫಲನಾಗಿದ್ದ. ಅಲ್ಲದೇ ಗಂಡನಿಗೆ ದುಡಿಮೆ ಇಲ್ಲದ ಕಾರಣ ಅಪ್ರಾಪ್ತೆ ತವರು ಮನೆ ಸೇರಿದಳು. ಇದರಿಂದ ಬೇಸತ್ತ ಉಮೇಶ್ ಶನಿವಾರ ಆಕೆಯ ತವರು ಮನೆಗೆ ಹೋಗಿ ಜಗಳ ಮಾಡಿ ಬಂದಿದ್ದು, ಬಳಿಕ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.