ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಮಾರ್ಕೆಟ್‌ವೊಂದರ ಮಾಲೀಕರಿಗೆ ಕೊರೊನಾ ಸೋಂಕಿದೆ ಎಂಬ ಸುಳ್ಳು ಸುದ್ದಿ ವೈರಲ್ ಆಗಿದೆ. ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುವೆಂಪು ನಗರದಲ್ಲಿರುವ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್ ಮಾಲೀಕನಿಗೆ ಕೊರೊನಾ ವೈರಸ್ ಇದೆ. ಅವರು ದೆಹಲಿಯ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದಾರೆ ಎಂದು ಆ ಸೂಪರ್ ಮಾರ್ಕೆಟ್ ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿಲಾಗಿದೆ.
ಈ ಸುಳ್ಳು ಸುದ್ದಿ ಸೂಪರ್ ಮಾರ್ಕೆಟ್ನ ಮಾಲೀಕನ ಮೊಬೈಲ್ಗೂ ತಲುಪಿದ್ದು, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ನಮ್ಮ ಶಾಖೆಗಳಿವೆ. ಈ ಸುದ್ದಿಯಿಂದಾಗಿ ನಮ್ಮ ನೌಕರರು ಹಾಗೂ ಗ್ರಾಹಕರು ಭಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್ನ ಮಾಲೀಕ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೋಲಿಸರು ವಂದತಿ ಮೂಲಕ ಸಾರ್ವಜನಿಕರಿಗೆ ಭಯ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.