ಮೈಸೂರು: ಎರಡು ದಿನದ ಡಿಎಫ್ಆರ್ಎಲ್ - ಡಿಆರ್ಡಿಒ ಆಯೋಜನೆ ಮಾಡಿರುವ ಸಿರಿಧಾನ್ಯಗಳ ವಸ್ತುಪ್ರದರ್ಶನದಲ್ಲಿ ಪ್ರಿಯ ಫುಡ್ನ ಮಳಿಗೆ ಎಲ್ಲರ ಗಮನ ಸೆಳೆಯಿತು. ಜನರು ಪ್ರಿಯ ಫುಡ್ ಮಳಿಗೆಗೆ ತಂಡೋಪ ತಂಡವಾಗಿ ಆಗಮಿಸಿ ಪ್ರಿಯ ಫುಡ್ನ ಸಿರಿಧಾನ್ಯ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಅವುಗಳ ರುಚಿ ಸವಿದು ಸಂತಸ ವ್ಯಕ್ತಪಡಿಸಿದರು. ಮೈಸೂರಿನ ಡಿಎಫ್ಆರ್ಎಲ್ - ಡಿಆರ್ಡಿಒದಿಂದ ಎರಡು ದಿನದ ಮಿಲಿಟರಿ ಪಡಿತರ ಮತ್ತು ನಿರ್ದಿಷ್ಟ ಪೌಷ್ಠಿಕಾಂಶಗಳ ಅವಶ್ಯಕತೆಗಳಿಗಾಗಿ ಸಿರಿಧಾನ್ಯಗಳ ರಾಷ್ಟ್ರೀಯ ಸಮ್ಮೇಳನವನ್ನು ಸೆ.29 ಮತ್ತು 30ರಂದು ನಡೆಸಲಾಗುತ್ತಿದೆ.
ಒಂದು ಕಡೆ ಸಿರಿಧಾನ್ಯ ಕುರಿತು ಗೋಷ್ಠಿಗಳು ನಡೆದರೆ ಮತ್ತೊಂದೆಡೆ ಸಿರಿಧಾನ್ಯಗಳ ವಸ್ತುಪ್ರದರ್ಶನವನ್ನು ನಡೆಸಲಾಗುತ್ತಿದೆ. ಇನ್ನು ಸಿರಿಧಾನ್ಯ ಆಹಾರ ಪದಾರ್ಥಗಳ ಪ್ರದರ್ಶನದಲ್ಲಿ ಪ್ರಿಯ ಫುಡ್ ಮಳಿಗೆ ಜನರನ್ನು ಆಕರ್ಷಿಸಿತು. ಪ್ರಿಯ ಫುಡ್ನ ಮಳಿಗೆಯಲ್ಲಿ ಸಿರಿಧಾನ್ಯಗಳಿಂದ ತಯಾರು ಮಾಡಲಾಗಿದ್ದ ಬಗೆಬಗೆಯ ತಿನಿಸುಗಳ ಬಗ್ಗೆ ಮಳಿಗೆಯಲ್ಲಿದ್ದ ಪ್ರಿಯ ಫುಡ್ನ ಸಿಬ್ಬಂದಿ, ಮಳಿಗೆಗೆ ಭೇಟಿ ನೀಡುತ್ತಿದ್ದ ಜನರಿಗೆ 30ಕ್ಕೂ ಹೆಚ್ಚು ಸಿರಿಧಾನ್ಯಗಳಿಂದ ತಯಾರು ಮಾಡಿದ್ದ ತಿನಿಸುಗಳ ಪರಿಚಯ ಮಾಡಿಕೊಟ್ಟರು.
ಪ್ರಿಯ ಫುಡ್ನ ಸಿಬ್ಬಂದಿ ಸುನಂದಾ ಈಟಿವಿ ಭಾರತದ ಜೊತೆಗೆ ಮಾತನಾಡಿ, ನಾವು ಸಿರಿಧಾನ್ಯ ಪದಾರ್ಥಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ನಮ್ಮ ಕಂಪನಿಯಿಂದ ಆರೋಗ್ಯಕರವಾದ ಸಿರಿಧಾನ್ಯಗಳಿಂದ ಬಗೆ ಬಗೆಯ ತಿನಿಸುಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮಲ್ಲಿ 9 ಬಗೆಯ ಉತ್ಪನ್ನಗಳಿವೆ. ಚಿಕ್ಕಮಕ್ಕಳಿಗೆ ಕುಕೀಸ್ ಇದೆ. ಇವುಗಳು ಸಕ್ಕರೆ ಮುಕ್ತವಾಗಿದ್ದು, ಬೆಲ್ಲದಿಂದ ತಯಾರಿಸಲಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ನಮ್ಮ ಕಂಪನಿಯ ಉದ್ದೇಶ ಜನರಿಗೆ ಆರೋಗ್ಯಕರವಾದ ಆಹಾರ ಪದಾರ್ಥವನ್ನು ನೀಡುವುದಾಗಿದೆ ಎಂದರು.
ನಮ್ಮ ಮಳಿಗೆಗೆ ಜನರು ಹರಿದು ಬರುತ್ತಿದ್ದಾರೆ, ಇಲ್ಲಿ ಜನರಿಗೆ ಟೇಸ್ಟ್ ಮಾಡಲು ತಿಸಿಸುಗಳನ್ನು ನೀಡಿದ್ದೆವು. ಜನರಿಂದ ನಮಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸದ್ಯದಲ್ಲೇ ನಾವು ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರಿಯ ಫುಡ್ ಮಳಿಗೆಗೆ ಭೇಟಿ ನೀಡಿದ್ದ ಕೋಲ್ಕತ್ತಾ ಮೂಲದ ಲೂನಾ ಚಕ್ರವರ್ತಿ ಈಟಿವಿ ಭಾರತದ ಜೊತೆಗೆ ಮಾತನಾಡಿ, ನಾನು ಪ್ರಿಯ ಫುಡ್ನ ಸಿರಿಧಾನ್ಯ ಉತ್ಪನ್ನಗಳ ಟೇಸ್ಟ್ ಮಾಡಿದೆ, ಇವು ತುಂಬಾ ಚನ್ನಾಗಿವೆ ಮತ್ತು ಯುವ ಸಮೂಹಕ್ಕೆ ತುಂಬಾ ಆರೋಗ್ಯಕರವಾಗಿದೆ. ಪ್ರಸ್ತುತ ಯುವ ಸಮೂಹ ಪಾಶ್ಚಾತ್ಯ ಆಹಾರ ಪದ್ಧತಿಗೆ ಹೆಚ್ಚು ಆದ್ಯತೆ ನೀಡುತಿದೆ. ಅವರು ನಮ್ಮ ದೇಶದ ಆಹಾರ ಪದ್ಧತಿಯನ್ನು ಅನುಸರಿಸಬೇಕು ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಿಂದ ದೇಶಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: MSP: 9 ವರ್ಷಗಳಲ್ಲಿ ಜೋಳ, ಸಜ್ಜೆ, ರಾಗಿಯ ಕನಿಷ್ಠ ಬೆಂಬಲ ಬೆಲೆ ಶೇ 100ರಿಂದ 150ರಷ್ಟು ಹೆಚ್ಚಳ