ETV Bharat / state

ಬಜಾಜ್​ ಸ್ಕೂಟರ್​ನಲ್ಲಿ ಅಮ್ಮನೊಂದಿಗೆ ದೇಶ ಸುತ್ತಿದ ಆಧುನಿಕ ಶ್ರವಣಕುಮಾರನ ವಿಶೇಷ ಸಂದರ್ಶನ - ಚೂಡಾರತ್ನ

ತಾಯಿಯ ಆಸೆಗಾಗಿ ತಂದೆ ಕೊಡಿಸಿದ ಹಳೆಯ ಬಜಾಜ್ ಚೇತಕ್ ಬೈಕ್​ನಲ್ಲಿ ಕನ್ಯಾಕುಮಾರಿಯಿಂದ ಕಾಶಿಯವರೆಗೂ ಅನೇಕ‌ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದ ಆಧುನಿಕ ಶ್ರವಣಕುಮಾರ ಕೃಷ್ಣ ಕುಮಾರ್ ಹಾಗೂ ತಾಯಿ ಚೂಡಾರತ್ನರ ವಿಶೇಷ ಸಂದರ್ಶನ ಇಲ್ಲಿದೆ.

Modern Shravanakumara
ತಾಯಿಯೊಂದಿಗೆ ಆಧುನಿಕ ಶ್ರವಣಕುಮಾರ
author img

By

Published : Sep 21, 2020, 8:35 PM IST

Updated : Sep 22, 2020, 8:53 AM IST

ಮೈಸೂರು: ತಾಯಿಯ ಆಸೆಗಾಗಿ ಇಡೀ ದೇಶದ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿ ವಾಪಸ್ ಆದ ಆಧುನಿಕ ಶ್ರವಣಕುಮಾರ ಕೃಷ್ಣ ಕುಮಾರ್ ಹಾಗೂ ತಾಯಿ ಚೂಡಾರತ್ನರ ವಿಶೇಷ ಸಂದರ್ಶನ ಇಲ್ಲಿದೆ.

ತನ್ನ ತಾಯಿಯೊಂದಿಗೆ ಆಧುನಿಕ ಶ್ರವಣಕುಮಾರ

ತಾಯಿಯ ಆಸೆಗಾಗಿ ತಂದೆ ಕೊಡಿಸಿದ ಹಳೆಯ ಬಜಾಜ್ ಚೇತಕ್ ಬೈಕ್​​ನಲ್ಲೇ ದೇಶದ ಎಲ್ಲಾ ತೀರ್ಥ ಕ್ಷೇತ್ರಗಳನ್ನು 2 ವರ್ಷ 9 ತಿಂಗಳು ನಿರಂತರವಾಗಿ ಪ್ರಯಾಣಿಸಿದ್ದಾರೆ. ಜನವರಿ 18ರ 2015 ರಂದು ಮೈಸೂರು ಬಿಟ್ಟ ತಾಯಿ, ಮಗ ಬಜಾಜ್ ಚೇತಕ್ ಸ್ಕೂಟರ್​​ನಲ್ಲಿ ತೀರ್ಥಯಾತ್ರೆ ಆರಂಭ ಮಾಡಿ ಕನ್ಯಾಕುಮಾರಿಯಿಂದ ಕಾಶಿಯವರೆಗೂ ಅನೇಕ‌ ಪುಣ್ಯಕ್ಷೇತ್ರಗಳ ದರ್ಶನ ಪಡೆದಿದ್ದಾರೆ.

Modern Shravanakumara
ತನ್ನ ತಾಯಿಯೊಂದಿಗೆ ಆಧುನಿಕ ಶ್ರವಣಕುಮಾರ

ಜೊತೆಗೆ ನೆರೆ ರಾಷ್ಟ್ರಗಳಾದ ನೇಪಾಳ, ಭೂತಾನ್, ಮ್ಯಾನ್ಮಾರ್​​ನ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ ತೀರ್ಥಯಾತ್ರೆ ಸಂಪೂರ್ಣಗೊಳಿಸಿದ್ದಾರೆ, ಸುಮಾರು 56,522 ಕಿಲೋ ಮೀಟರ್​ಗಳನ್ನು ಈ ಸ್ಕೂಟರ್​​ನಲ್ಲೇ ಪ್ರಯಾಣಿಸಿ ತೀರ್ಥಯಾತ್ರೆ ಮುಗಿಸಿ ಮೈಸೂರಿಗೆ ಆಗಮಿಸಿದ್ದಾರೆ.

Modern Shravanakumaraತನ್ನ ತಾಯಿಯೊಂದಿಗೆ ಆಧುನಿಕ ಶ್ರವಣಕುಮಾರ

ಈಟಿವಿ ಭಾರತ ಜೊತೆ ಮಾತನಾಡಿದ ಚೂಡಾರತ್ನ, ನನ್ನ ಗಂಡ ಇದ್ದಾಗ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅವಕಾಶ ಒದಗಿ ಬಂದಿರಲಿಲ್ಲ, ಜೀವನವೆಲ್ಲಾ ಮನೆ‌ ಕೆಲಸದಲ್ಲೇ ಕಳೆದಿದ್ದೆ. ನನ್ನ ಮಗ ಇಡೀ ಭಾರತದ ಧಾರ್ಮಿಕ ಕ್ಷೇತ್ರವಲ್ಲದೆ ನೆರೆ ರಾಷ್ಟ್ರಗಳ‌ ಧಾರ್ಮಿಕ ಕ್ಷೇತ್ರಗಳ‌ ದರ್ಶನ ಮಾಡಿಸಿದ್ದಾನೆ. ನನ್ನ ಮಗ ನನ್ನ ಹೆಮ್ಮೆ ಎಂದು ತಾಯಿ ಚೂಡಾರತ್ನ ಸಂತಸ ವ್ಯಕ್ತಪಡಿಸಿದ್ದಾರೆ.

Modern Shravanakumara
ತನ್ನ ತಾಯಿಯೊಂದಿಗೆ ಆಧುನಿಕ ಶ್ರವಣಕುಮಾರ

ಮಹೀಂದ್ರ ಕಂಪನಿಯ ಆನಂದ್ ಅವರು ಉಡುಗೊರೆಯಾಗಿ ಕಾರ್ ನೀಡಿದ್ದು ನಮಗೆ ಸಂತೋಷ ತಂದಿದೆ. ಅವರಿಗೆ ನಮ್ಮ ಧನ್ಯವಾದಗಳು ಹಾಗೂ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

Last Updated : Sep 22, 2020, 8:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.