ಮೈಸೂರು : ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯಾದ್ರೂ ಜನ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ವ್ಯಾಪಾರ- ವಹಿವಾಟು ಸಂಪೂರ್ಣ ಹಾಳಾಗಿದೆ. ವಸ್ತುಸ್ಥಿತಿ ನೋಡಿದ್ರೆ ಈ ಪರಿಸ್ಥಿತಿಯಿಂದ ಪಾರಾಗಲು ನಮಗೆ 1 ವರ್ಷವಾದ್ರೂ ಬೇಕು ಅಂತಾರೆ ಸಗಟು ವ್ಯಾಪಾರಿ ಸೈಯದ್.
ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಪದಾರ್ಥಗಳ ಬೆಲೆ ಕಡಿಮೆ ಇತ್ತು. ಪೂರೈಕೆಯೂ ಕಡಿಮೆ ಇತ್ತು, ವಾಹನಗಳ ಸಂಚಾರವೂ ಇರಲಿಲ್ಲ, ಕೆಲಸಗಾರರಿಗೆ ಕೆಲಸವಿರಲಿಲ್ಲ, ದೊಡ್ಡ ದೊಡ್ಡ ಕಂಪನಿಗಳು ಬಂದ್ ಆಗಿದ್ದವು. ಯಾವುದೇ ಪದಾರ್ಥಗಳು ಬರುತ್ತಿರಲಿಲ್ಲ, ಈಗ ಅನ್ಲಾಕ್ ಆಗಿದ್ದರಿಂದ ಎಲ್ಲಾ ಕಡೆಯಿಂದ ಪದಾರ್ಥಗಳು ಬರುತ್ತಿವೆ. ಆದರೆ, ವ್ಯಾಪಾರ ಮಾತ್ರ ಆಗುತ್ತಿಲ್ಲ.
ಕೊರೊನಾ ಇಲ್ಲ ಇಲ್ಲ ಅಂತಾರೆ. ಆದರೆ, ದಿನೇದಿನೆ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿತ ಅಧಿಕಾರಿಗಳು ಯಾರೂ ಗಮನ ಹರಿಸುತ್ತಿಲ್ಲ.
ಜನ ಮಾಸ್ಕ್ ಎಂಬುದನ್ನು ಮರೆತಿದ್ದಾರೆ. ಇವೆಲ್ಲವನ್ನು ನೋಡಿದ್ರೆ ಮೈಸೂರಿನಲ್ಲಿ ವ್ಯಾಪಾರ ಹೆಚ್ಚಾಗಬೇಕಾದ್ರೆ ಇನ್ನೂ 1 ವರ್ಷ ಬೇಕೇಬೇಕು ಅನ್ನಿಸುತ್ತೆ. ಈ ನಡುವೆ ಪದಾರ್ಥಗಳ ಬೆಲೆ ಮಾತ್ರ ಜಾಸ್ತಿಯಾಗುತ್ತಿದೆ. ಸಂಪಾದನೆ ಮಾತ್ರ ಆಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಸೈಯದ್.