ETV Bharat / state

ಮೈಸೂರು ಪಾಲಿಕೆಯಿಂದ 22 ಕೋವಿಡ್ ಟೆಸ್ಟ್ ಕೇಂದ್ರ ಸ್ಥಾಪನೆ: ವಿದ್ಯಾರ್ಥಿಗಳು-ಶಿಕ್ಷಕರಿಗೆ ಉಚಿತ ಪರೀಕ್ಷೆ - ಮೈಸೂರಿನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಉಚಿತ ಕೋವಿಡ್ ಟೆಸ್ಟ್

22 ಕೋವಿಡ್ ಟೆಸ್ಟ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು‌ ಎಂದು ಮೈಸೂರು ಮಹಾನಗರ ಪಾಲಿಕೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.

Establishment of 22 Covid Test Center by Mysore City Corporation
ನಗರ ಪಾಲಿಕೆ ವತಿಯಿಂದ 22 ಕೋವಿಡ್ ಟೆಸ್ಟ್ ಕೇಂದ್ರ ಸ್ಥಾಪನೆ
author img

By

Published : Nov 19, 2020, 2:44 PM IST

ಮೈಸೂರು: ಕಾಲೇಜು‌ಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆ 22 ಕಡೆ ಕೋವಿಡ್ ಟೆಸ್ಟ್ ಕೇಂದ್ರಗಳನ್ನು ತೆರೆದಿದೆ‌.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಕುಂಬಾರಕೊಪ್ಪಲು, ಬನ್ನಿಮಂಟಪ,‌‌ ವೀರನಗೆರೆ, ರಾಜೇಂದ್ರನಗರ, ಶಾಂತಿನಗರ, ಚಾಮುಂಡಿಪುರಂ, ಕುರುಬರಹಳ್ಳಿ ವೃತ್ತ, ವಿ.ವಿ.ಪುರಂ, ಜಯನಗರ, ಬಿ.ಡಿ. ಆಸ್ಪತ್ರೆ, ಜಿ.ಬಿ. ಪಾಳ್ಯ, ಸಿಐಟಿಬಿ, ಸೋಮಾನಿ ಕಾಲೇಜು, ‌ರಾಜೀವ್ ನಗರ ರಂಗಮಂದಿರ, ಪುರಭವನ, ದೇವರಾಜ ಮಾರುಕಟ್ಟೆ ಮುಂಭಾಗ, ಬಿಲ್ಡರ್ ಅಸೋಸಿಯೇಷನ್, ‌ನ್ಯಾಯಾಲಯದ ಆವರಣ, ಕೆ.ಆರ್. ಆಸ್ಪತ್ರೆ, ಕೋವಿಡ್ ಜಿಲ್ಲಾಸ್ಪತ್ರೆ, ಮಕ್ಕಳ ಕೂಟ, ಅರಮನೆ ಈ 22 ಸ್ಥಳಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು‌ ಎಂದು ಮೈಸೂರು ಮಹಾನಗರ ಪಾಲಿಕೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.

22 ಕೇಂದ್ರಗಳಲ್ಲಿ ಪ್ರತಿ ಗುರುವಾರ ರಜೆ ಇರುವುದರಿಂದ ಅಂದು ಹೊರತುಪಡಿಸಿ, ಉಳಿದ ದಿನಗಳಲ್ಲಿ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮನವಿ ಮಾಡಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.