ಮೈಸೂರು: ದಕ್ಷಿಣ ಭಾರತದ 7 ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ 5 ವರ್ಷಕ್ಕೊಮ್ಮೆ ನಡೆಯಲಿರುವ ಆನೆಗಳ ಗಣತಿ ಆರಂಭವಾಗಿದೆ. ಕರ್ನಾಟಕ ಅರಣ್ಯ ಇಲಾಖೆಯೂ ಈ ಆನೆಗಳ ಗಣತಿಯ ನೇತೃತ್ವ ವಹಿಸಿದ್ದು, ಕರ್ನಾಟಕದ ನಾಗರಹೊಳೆ - ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿಯೂ ಏಕಕಾಲಕ್ಕೆ ಆನೆಗಳ ಗಣತಿ ಆರಂಭವಾಗಿದೆ.
ದೇಶದಲ್ಲಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಇಂದಿನಿಂದ ಮೂರು ದಿನಗಳ ಕಾಲ 5 ವರ್ಷಕ್ಕೊಮ್ಮೆ ನಡೆಯುವ ಆನೆ ಗಣತಿಯ ನೇತೃತ್ವ ವಹಿಸಿದೆ. ಕರ್ನಾಟಕದ ಜೊತೆಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಒಂದೇ ಅವಧಿಯಲ್ಲಿ ಏಕಕಾಲಕ್ಕೆ ಮೂರು ದಿನಗಳ ಕಾಲ ಆನೆಗಳ ಗಣತಿ ಆರಂಭವಾಗಿದೆ. ಕರ್ನಾಟಕದ ಆನೆಗಳು ದಕ್ಷಿಣ ಭಾರತದಲ್ಲಿ ಇರುವ ಮಹಾರಾಷ್ಟ್ರ, ಗೋವಾ ಕೇರಳ, ತಮಿಳುನಾಡು ಭಾಗಗಳಲ್ಲಿ ಓಡಾಡುವ ಕಾರಣದಿಂದ ಕರ್ನಾಟಕ ಅರಣ್ಯ ಇಲಾಖೆ ಆನೆಗಳ ಗಣತಿಯ ನೇತೃತ್ವ ವಹಿಸಿದೆ.
ರಾಜ್ಯವಾರು ಆನೆಗಳ ಸಂಖ್ಯೆ:ದೇಶದಲ್ಲಿಯೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಕರ್ನಾಟಕವಾಗಿದೆ. 2017 ರ ಆನೆ ಗಣತಿಯಲ್ಲಿ ಕರ್ನಾಟಕದಲ್ಲಿ 6049 ಆನೆಗಳಿದ್ದು, ಅಸ್ಸೋಂನಲ್ಲಿ 5,719 , ಕೇರಳದಲ್ಲಿ 3,504 ಆನೆಗಳಿದ್ದು. ಕರ್ನಾಟಕ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ.
ಈ ಬಾರಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಆನೆಗಳಿವೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಎಷ್ಟೆಷ್ಟು ಆನೆಗಳಿವೆ ಎಂಬುದನ್ನು ಕಂಡುಹಿಡಿಯಲು, ಈ ಆನೆ ಗಣತಿ ಪ್ರಕ್ರಿಯೆ ಸಹಾಯಕವಾಗಲಿದೆ.
ಆನೆ ಗಣತಿ ಹೇಗೆ: ದಕ್ಷಿಣ ಭಾರತದ ಏಳು ರಾಜ್ಯಗಳ, ದಟ್ಟ ಕಾಡುಗಳಲ್ಲಿ ನಡೆಯುವ ಮೂರು ದಿನಗಳ ಆನೆಗಳ ಗಣತಿಯನ್ನು ಮೂರು ವಿಧಾನಗಳಲ್ಲಿ ಮಾಡಲಾಗುತ್ತದೆ.ಆನೆಗಳ ಲದ್ದಿ ಮಾದರಿಯನ್ನು ಸಂಗ್ರಹ ಮಾಡಿ, ನೇರವಾಗಿ ಏಣಿಕೆ ಮಾಡಲಾಗುತ್ತದೆ. ಅರಣ್ಯ ಇಲಾಖೆ ವ್ಯಾಪ್ತಿಯ 3-4 ಸಿಬ್ಬಂದಿ, ಅರಣ್ಯಗಳಲ್ಲಿ ನಿರ್ದಿಷ್ಟ ಬ್ಲಾಕ್ ನಲ್ಲಿ ಕಾಣಿಸುವ ಆನೆಗಳನ್ನು ಲೆಕ್ಕ ಹಾಕುವುದು ಹಾಗೂ ಗುಂಪಿನಲ್ಲಿ ಕಾಣಿಸುವ ಆನೆಗಳ ಛಾಯಾಚಿತ್ರ ತೆಗೆದು ಅದರ ಆಧಾರದ ಮೇಲೆ ಏಣಿಕೆ ಮಾಡುವುದು. ಕಾಡಿನ ಮಧ್ಯೆ ಬರುವ ಹಳ್ಳ - ಕೊಳ್ಳಗಳ ಸಮೀಪ ನೀರು ಕುಡಿಯಲು ಬರುವ ಆನೆಗಳನ್ನು ಅರಣ್ಯ ಸಿಬ್ಬಂದಿ ಲೆಕ್ಕಹಾಕುವುದು ಸೇರಿದಂತೆ ಹಲವು ಮಾನದಂಡಗಳಲ್ಲಿ ಆನೆ ಗಣತಿ ನಡೆಯಲಿದೆ.
ನಾಗರಹೊಳೆಯಲ್ಲೂ ಆನೆ ಗಣತಿ ಆರಂಭ:ಬಂಡೀಪುರ-ನಾಗರಹೊಳೆ ಅರಣ್ಯ ವ್ಯಾಪ್ತಿಯ ವೀರನಹೊಸಳ್ಳಿಯಿಂದ, ಇಂದಿನಿಂದ ಆನೆಗಣತಿ ನಡೆಯಲಿದೆ. ಈ ಗಣತಿ ಕಲ್ಲಹಳ್ಳಿ, ಮೂರ್ಕಲ್ಲು, ವೀರನಹೊಸಳ್ಳಿ ವನ್ಯಜೀವಿ ಧಾಮ ಹಾಗೂ ಮತ್ತಿಗೋಡು ಅರಣ್ಯ ವಿಭಾಗ ವ್ಯಾಪ್ತಿ ಆನೆಗಳ ಗಣತಿ ಇಂದಿನಿಂದ ಪ್ರಾರಂಭ ಆಗಿದೆ.
ನಾಗರಹೊಳೆ ವ್ಯಾಪ್ತಿಯ 8 ವಲಯಗಳಲ್ಲಿ, ಅರಣ್ಯ ಇಲಾಖೆಯ ಸುಮಾರು 350 ಸಿಬ್ಬಂದಿಯನ್ನು ಮೂರು ದಿನಗಳ ಕಾಲದ ಆನೆ ಗಣತಿಯಲ್ಲಿ ಬಳಸಿಕೊಳ್ಳಲಾಗಿದೆ. ಈ ಬಾರಿ ಸ್ವಯಂ ಸೇವಕರನ್ನು ಬಳಸಿಕೊಂಡಿಲ್ಲ ಎಂದು ನಾಗರಹೊಳೆಯ ಡಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.
ಇದನ್ನೂಓದಿ:ಮತ್ತೆ ಕಡಬದ ರೆಂಜಿಲಾಡಿಯಲ್ಲಿ 2 ಕಾಡಾನೆಗಳು ಪ್ರತ್ಯಕ್ಷ.. ವಿಡಿಯೋ ವೈರಲ್