ಮೈಸೂರು: ಅರಮನೆಯ ಆನೆ ಶಿಬಿರದಲ್ಲಿ ಮಾಜಿ ಜಂಬೂಸವಾರಿಯ ಕ್ಯಾಪ್ಟನ್ ಅರ್ಜುನ ಆನೆ ಎಲ್ಲರ ಕೇಂದ್ರ ಬಿಂದುವಾಗಿದ್ದು, ಆತನ ತುಂಟಾಟ ಗಮನ ಸೆಳೆಯುತ್ತಿದೆ.ಮೊದಲ ಹಂತದ ಗಜಪಡೆಯಲ್ಲಿ ಹಿರಿಯಣ್ಣನಾಗಿ ಬಂದಿರುವ 63 ವರ್ಷದ ಅರ್ಜುನ ಆನೆ 9 ಬಾರಿ ಅಂಬಾರಿ ಹೊತ್ತ ಆನೆಯಾಗಿದ್ದು, ಈ ಬಾರಿ ಸಹಾಯಕ ಆನೆಯಾಗಿ ಆಗಮಿಸಿದೆ.
ಈಗ ಶಿಬಿರದಲ್ಲಿ ಹಿರಿಯಣ್ಣನಾಗಿದ್ದು ತುಂಬಾ ತುಂಟಾಟಕ್ಕೆ ಹೆಸರಾಗಿದ್ದಾನೆ. ಪಕ್ಕದ ಭೀಮ ಆನೆ ಜೊತೆ ತುಂಟಾಟ, ಮಾವುತರು ಮೇವು ತಂದು ಹಾಕಿದರೆ ಆ ಮೇವನ್ನು ತಿನ್ನುವ ಮುನ್ನ ಸೊಂಡಲಿನಿಂದ ಎತ್ತಿ ಬೆನ್ನ ಮೇಲೆ ಹಾಕಿಕೊಳ್ಳುವುದು, ಫೋಟೋ ತೆಗೆಯಲು ಬಂದರೆ ಸೊಂಡಿಲನ್ನು ಎತ್ತಿ ಫೋಟೋ ಗೆ ಪೋಸ್ ನೀಡುವ ಮೂಲಕ ಆತನ ತುಂಟತನ ಎಲ್ಲರ ಗಮನ ಸೆಳೆಯುತ್ತಿದೆ.
ಬಳ್ಳೆ ಆನೆ ಶಿಬಿರದಲ್ಲಿ ಒಂಟಿಯಾಗಿ ಇದ್ದ ಅರ್ಜುನ ಆನೆ ಇಲ್ಲಿ ಸ್ನೇಹಿತರು ಸಂಗಾತಿಗಳು ಸಿಕ್ಕ ಖುಷಿಯಲ್ಲಿ ತುಂಟಾಟದ ಮೂಲಕ ಶಿಬಿರದಲ್ಲಿ ಗಮನ ಸೆಳೆಯುತ್ತಿದ್ದಾನೆ.
ಇದನ್ನೂ ಓದಿ: ಸಂಭಾವನೆ ಪಡೆಯದೆ ಪುಣ್ಯಕೋಟಿ ಯೋಜನೆಗೆ ರಾಯಭಾರಿಯಾಗಲು ಒಪ್ಪಿದ ಕಿಚ್ಚ ಸುದೀಪ್