ETV Bharat / state

ವಿದ್ಯುತ್ ಸಂಪರ್ಕ ಕದ್ದು ಬಳಕೆ: ತಂದೆ-ಮಗನಿಗೆ ನ್ಯಾಯಾಲಯದಿಂದ ದಂಡ - ವಿದ್ಯುತ್ ಸಂಪರ್ಕ ಕದ್ದ ಆರೋಪದಡಿ ತಂದೆ, ಮಗನಿಗೆ ದಂಡ

ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಆರೋಪದಡಿ ತಂದೆ, ಮಗನಿಗೆ ಮೈಸೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ.

ತಂದೆ-ಮಗನಿಗೆ ದಂಡ
ತಂದೆ-ಮಗನಿಗೆ ದಂಡ
author img

By

Published : Jan 12, 2020, 9:49 PM IST

ಮೈಸೂರು: ಇಟ್ಟಿಗೆ ತಯಾರಿಸುವ ಘಟಕಕ್ಕೆ ಅನಧಿಕೃತ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಆರೋಪದಡಿ ತಂದೆ, ಮಗನಿಗೆ ಹುಣಸೂರಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಮಧುಸೂದನ್ ದಂಡ ವಿಧಿಸಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ(61) ಅವರಿಗೆ ವಿದ್ಯುತ್ ಕಳ್ಳತನ ಮಾಡಿರುವ ಅಪರಾಧಕ್ಕೆ 2,02,000 ರೂ. ದಂಡ, ವಿದ್ಯುತ್ ಲೈನ್‌ಗೆ ಅಡಚಣೆ ಉಂಟು ಮಾಡಿರುವ ಅಪರಾಧಕ್ಕೆ 5ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 2ನೇ ಆರೋಪಿಯಾಗಿರುವ ಚಿಕ್ಕಮಾದಯ್ಯ ಅವರ ಪುತ್ರ ಬಸವರಾಜು(31) ಅವರಿಗೆ 10ಸಾವಿರ ರೂ. ದಂಡ, ವಿದ್ಯುತ್ ಲೈನ್‌ಗೆ ಅಡಚಣೆ ಉಂಟು ಮಾಡಿರುವ ಅಪರಾಧಕ್ಕೆ 5ಸಾವಿರ ರೂ. ದಂಡ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಎಂ.ಕನ್ನೇನಹಳ್ಳಿ ತಮ್ಮ ಜಮೀನಿನಲ್ಲಿ ಇಟ್ಟಿಗೆ ತಯಾರಿಸುವ ಘಟಕವನ್ನು ಆರೋಪಿಗಳು ಅನಧಿಕೃತವಾಗಿ ಸ್ಥಾಪಿಸಿಕೊಂಡಿದ್ದರು. ಅದಕ್ಕೆ ಬೋರ್‌ವೆಲ್‌ನಿಂದ ನೀರು ತೆಗೆಯಲು ಹತ್ತಿರದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್‌ನಿಂದ ಅನಧಿಕೃತವಾಗಿ ವೈರನ್ನು ಎಳೆದು ಅವರ ಜಮೀನನಲ್ಲಿರುವ ಪಂಪ್‌ಸೆಟ್‌ಗೆ ಸಂಪರ್ಕ ಕಲ್ಪಿಸಿ ವಿದ್ಯುತ್ ಕಳ್ಳತನ ಮಾಡಿದ್ದಾರೆ. ಚೆಸ್ಕಾಂನ ಜಾಗೃತ ದಳದವರು ವಿಷಯ ತಿಳಿದು 2014 ರಲ್ಲಿ ಆ ಈ ಅಕ್ರಮ ಕೃತ್ಯವನ್ನು ಪತ್ತೆ ಹಚ್ಚಿದ್ದರು. ಕಲಂ 135(ವಿದ್ಯುತ್ ಕಳ್ಳತನ) ಮತ್ತು 138(ವಿದ್ಯುತ್ ಲೈನ್‌ಗೆ ಅಡಚಣೆ) ಎಲೆಕ್ಟ್ರಿಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಾಗೃತ ದಳದ ಇನ್‌ಸ್ಪೆಕ್ಟರ್ ಸೂರಜ್ ಅವರು ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಎರಡೂ ಅಪರಾಧಗಳನ್ನು ಮಾಡಿರುವುದು ಸಾಕ್ಷಿ ವಿಚಾರಣೆಯಿಂದ ಸಾಬೀತಾದ ಮೇರೆಗೆ ಆರೋಪಿಗಳಿಬ್ಬರಿಗೂ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

Intro:ವಿದ್ಯುತ್Body:ಮೈಸೂರು: ಇಟ್ಟಿಗೆ ತಯಾರಿಸುವ ಘಟಕಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಂದೆ,ಮಗನಿಗೆ ಹುಣಸೂರಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಮಧುಸೂದನ್ ಅವರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ(೬೧) ಅವರಿಗೆ ವಿದ್ಯುತ್ ಕಳ್ಳತನ ಮಾಡಿರುವ ಅಪರಾಧಕ್ಕೆ ೨.೦೨ಲಕ್ಷ ರೂ. ದಂಡ, ವಿದ್ಯುತ್ ಲೈನ್‌ಗೆ ಅಡಚಣೆ ಉಂಟು ಮಾಡಿರುವ ಅಪರಾಧಕ್ಕೆ ೫ಸಾವಿರ ರೂ. ದಂಡ ಕೊಡಲು ತಪ್ಪಿದಲ್ಲಿ ಒಂದು ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ೨ನೇ ಆರೋಪಿಯಾಗಿರುವ ಚಿಕ್ಕಮಾದಯ್ಯ ಅವರ ಪುತ್ರ ಬಸವರಾಜು(೩೧) ಅವರಿಗೆ ೧೦ಸಾವಿರ ದಂಡ, ವಿದ್ಯುತ್ ಲೈನ್‌ಗೆ ಅಡಚಣೆ ಉಂಟು ಮಾಡಿರುವ ಅಪರಾಧಕ್ಕೆ ೫ಸಾವಿರ ದಂಡ, ದಂಡ ಕೊಡಲು ತಪ್ಪಿದ್ದಲ್ಲಿ ಒಂದು ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ.
ಎಂ.ಕನ್ನೇನಹಳ್ಳಿ ತಮ್ಮ ಜಮೀನ ಸರ್ವೇ ನಂ.೪/೪೧ರಲ್ಲಿ ಇಟ್ಟಿಗೆ ತಯಾರಿಸುವ ಘಟಕವನ್ನು ಅನಧಿಕೃತವಾಗಿ ಸ್ಥಾಪಿಸಿಕೊಂಡಿದ್ದು, ಅದಕ್ಕೆ ಬೇಕಾದ ನೀರಿಗಾಗಿ ಬೋರ್‌ವೆಲ್‌ನಿಂದ ನೀರು ತೆಗೆಯಲು ಹತ್ತಿರದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್‌ನಿಂದ ಅನಧಿಕೃತವಾಗಿ ವೈರನ್ನು ಎಳೆದು ಅವರ ಜಮೀನನಲ್ಲಿರುವ ೫ ಎಚ್.ಪಿಸಬ್‌ಮರ್ಶಿಬಲ್ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ವಿದ್ಯುತ್ ಕಳ್ಳತನ ಮಾಡಿದ್ದು ಮತ್ತು ಅದಕ್ಕಾಗಿ ವಿದ್ಯುತ್ ಲೈನ್‌ನಲ್ಲಿ ಅಡಚಣೆ ಉಂಟು ಮಾಡಿ ವಿದ್ಯುತ್ ಕಂಬದಿಂದ ಲೈನ್ ಎಳೆದುಕೊಂಡಿದ್ದು ಚೆಸ್ಕಾಂನ ಜಾಗೃತ ದಳದವರು  ೨೦೧೪ ನವೆಂಬರ್ ೧೧ರಂದು ದಾಳಿ ಮಾಡಿದ್ದರು. ಕಲಂ ೧೩೫(ವಿದ್ಯುತ್ ಕಳ್ಳತನ) ಮತ್ತು ೧೩೮(ವಿದ್ಯುತ್ ಲೈನ್‌ಗೆ ಅಡಚಣೆ) ಎಲೆಕ್ಟ್ರಿಸಿಟಿ ಕಾಯ್ದೆ ಯಡಿಯಲ್ಲಿ ಜಾಗೃತ ದಳದ ಇನ್‌ಸ್ಪೆಕ್ಟರ್ ಸೂರಜ್ ಅವರು ಆರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಎರಡು ಅಪರಾಧಗಳನ್ನು ಮಾಡಿರುವುದು ಸಾಕ್ಷಿ ವಿಚಾರಣೆಯಿಂದ ಸಾಬೀತಾದ ಮೇರೆಗೆ ಆರೋಪಿಗಳಿಬ್ಬರಿಗೂ ಹುಣಸೂರಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಮಧುಸೂದನ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಭಾರ ಸರ್ಕಾರಿ ಅಭಿಯೋಜಕರಾದ ಅಜಿತ್‌ಕುಮಾರ್ ಡಿ.ಹಮಿಗಿ ಅವರು ವಾದ ಮಂಡಿಸಿದರು.

(ಮೊದಲು ಸುದ್ದಿ ಕಳುಹಿಸಿದಾಗ 2.20 ಲಕ್ಷ ಬರೆದಿದ್ದೆ, ಆದರೆ ಅದು 2.02( ಎರಡು ಲಕ್ಷ ಎರಡು ಸಾವಿರ)Conclusion:ವಿದ್ಯುತ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.