ಮೈಸೂರು: ಹುಣಸೂರು ಉಪ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. ಆದರೆ, ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕಿದ್ದ ಅಧಿಕಾರಿಗಳು ತಡವಾಗಿ ಬಂದಿದ್ದಕ್ಕೆ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಪೂರ್ವಿಕಾ ಕ್ಲಾಸ್ ತೆಗೆದುಕೊಂಡರು.
ಸರಿಯಾದ ಸಮಯಕ್ಕೆ ಆಗಮಿಸದ ಸಿಬ್ಬಂದಿ ವಿರುದ್ಧ ಚುನಾವಣಾಧಿಕಾರಿ ಪೂರ್ವಿಕಾ ಗರಂ ಆಗಿದ್ದು, ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳಿಗೆ ಶಾಶ್ವತವಾಗಿ ಮನೆಯಲ್ಲಿರುವಂತೆ ಹೇಳಿ. ಕಾಮನ್‌ಸೆನ್ಸ್ ಇಲ್ವಾ ನಿಮಗೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಹುಣಸೂರಿನ ಮಸ್ಟರಿಂಗ್ ಕಾರ್ಯಕ್ಕೆ ಸೂಕ್ತ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿ ಬೆವರಳಿಸಿದ್ರು.