ETV Bharat / state

ಕೆ ಆರ್ ನಗರದಲ್ಲಿ ಹೀಗಿದೆ ಚುನಾವಣೆ ಲೆಕ್ಕಾಚಾರ: ಕ್ಷೇತ್ರ ಉಳಿವಿಗಾಗಿ ಕೈ- ದಳ ನಡುವೆ ನೇರ ಹಣಾಹಣಿ - assembly election 2023

ಕೆ ಆರ್ ನಗರ ಮೈಸೂರು ಜಿಲ್ಲೆಯ ಪ್ರಮುಖ ಮತಕ್ಷೇತ್ರಗಳಲ್ಲಿ ಒಂದು. ಭತ್ತದ ಕಣಜ ಎಂದು ಕರೆಸಿಕೊಳ್ಳಲುವ ಈ ಕ್ಷೇತ್ರ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾದಂತೆ ರಾಜ್ಯ ರಾಜಕೀಯಕ್ಕೂ ಸಾಕ್ಷಿಯಾಗಿದ್ದನ್ನು ಮರೆಯುವಂತಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಗಿದ್ದರಿಂದ ಕ್ಷೇತ್ರದ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಹಲವರು ಕಣ್ಣಿಟ್ಟಿದ್ದನ್ನು ಗಮನಿಸಬಹುದು.

Calculation Of Assembly Constituenc
Calculation Of Assembly Constituenc
author img

By

Published : Mar 14, 2023, 7:28 PM IST

Updated : Mar 15, 2023, 11:49 AM IST

ಮೈಸೂರು: ಜಿಲ್ಲೆಯ ಭತ್ತದ ಕಣಜ ಖ್ಯಾತಿಯ ಕೆ ಆರ್ ನಗರ ಮತಕ್ಷೇತ್ರವು ಚುನಾವಣೆಯ ಹೊಸ್ತಿಲಲ್ಲಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕ ಸಾರಾ ಮಹೇಶ್ ಹಾಗೂ ಕಾಂಗ್ರೆಸ್​​ನ ರವಿ ಶಂಕರ್ ನಡುವೆ ಈ ಸಾರಿ ನೇರ ಪೈಪೋಟಿ ಏರ್ಪಡಲಿದೆ ಎಂಬ ಮಾತು ಅಲ್ಲಗಳೆಯುವಂತಿಲ್ಲ. ಹಾಗಾಗಿ ‌ಈ ಬಾರಿ ಗೆಲುವು ಯಾರ ಪಾಲಾಗಲಿದೆ ಎಂಬುದು ಕೊನೆಯವರೆಗೂ ಊಹಿಸಿಲು ಸಾಧ್ಯವಿಲ್ಲ. ಜಿದ್ದಾಜಿದ್ದಿ ಮತ್ತು ನೇರ ಹಣಾಹಣಿ ಇದ್ದುದರಿಂದ ಚುನಾವಣೆ ಘೋಷಣೆಯಾಗದಿದ್ದರೂ ಎರಡೂ ಪಕ್ಷಗಳು ಈಗಾಗಲೇ ಪ್ರಚಾರ ಕೂಡ ಆರಂಭಿಸಿವೆ. ಕ್ಷೇತ್ರದಲ್ಲಿರುವ ಜಾತಿ ಪ್ರಾಬಲ್ಯ, ಒಟ್ಟು ಮತದಾರರ ವಿವರ, ಈವರೆಗೆ ನಡೆದ ಹದಿನೈದು ಚುನಾವಣೆಯಲ್ಲಿ ಯಾರೆಲ್ಲ ಗೆದ್ದು ಅಧಿಕಾರ ಹಿಡಿದಿದ್ದರು ಎಂಬ ಸಂಕ್ಷಿಪ್ತ ವಿವರ ಬರುವ ವಿಧಾನಸಭೆಯ ಚುನಾವಣೆಗೂ ಒಂದರ್ಥ ಕೊಡಬಲ್ಲದು.

ಒಕ್ಕಲಿಗರು ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಮತ್ತೆ ಸವಾಲಿನ ಚುನಾವಣೆಯಾಗಿದ್ದರೆ ಕಾಂಗ್ರೆಸ್​​ನ ಡಿ. ರವಿಶಂಕರ್​​ಗೆ ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಇವರಿಬ್ಬರ ನಡುವಿನ ನೇರ ಸ್ಪರ್ಧೆ ಆಗಲಿದೆ ಎಂಬ ಮಾಹಿತಿ ಇದೆ. ಈ ನಡುವೆ ತಾಲೂಕಿನಲ್ಲಿ ಬಿಜೆಪಿ ಸಂಘಟನೆಯೇ ಇಲ್ಲದಾಗಿದ್ದರಿಂದ ಮೂರನೇ ಸ್ಥಾನದಲ್ಲಿದೆ.

Election calculation in KR Nagar
ಸಾರಾ ಮಹೇಶ್

ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ: ಕ್ಷೇತ್ರದ ಇತಿಹಾಸ ನೋಡಿದರೆ ಜಾತಿ ಕೇಂದ್ರಿತವಾಗಿಯೇ ಈ ಭಾಗದಲ್ಲಿ ಚುನಾವಣೆ ನಡೆಯುವುದು ಹೆಚ್ಚು. 58 ಸಾವಿರ ಒಕ್ಕಲಿಗ ಸಮುದಾಯದ ಮತದಾರರಿದ್ದರೆ 52 ಸಾವಿರ ಕುರುಬ ಸಮುದಾಯ ಮತಗಳಿವೆ. ತಾಲೂಕಿನಲ್ಲಿ ಇವೆರಡು ಸಮುದಾಯ ನಿರ್ಣಾಯಕವಾಗಿದೆ.

ಇದೇ ಕಾರಣಕ್ಕೆ ಈ ಜಿಲ್ಲೆಯಲ್ಲಿ ಜಾತಿ ರಾಜಕಾರಣಕ್ಕೆ ಮತದಾರ ಹೆಚ್ಚು ಪ್ರಭಾವಕ್ಕೆ ಒಳಗಾಗಿದ್ದಾನೆ. ಮಾತ್ರವಲ್ಲದೇ, ಜೆಡಿಎಸ್‌ ವರಿಷ್ಠ ಹೆಚ್​.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಹಿರಿಯ ರಾಜಕಾರಣಿ ಸಿ.ಹೆಚ್​.ವಿಶ್ವನಾಥ್‌ ಪ್ರಭಾವ ಕೂಡ ಹೆಚ್ಚಿದೆ. ಈ ಎರಡು ಸಮುದಾಯ ಹೊರತುಪಡಿಸಿ ಪರಿಶಿಷ್ಟ ಜಾತಿ 20 ಸಾವಿರ, ಪರಿಶಿಷ್ಟ ಪಂಗಡ 15 ಸಾವಿರ, ಲಿಂಗಾಯಿತರು 15 ಸಾವಿರ, ಮುಸ್ಲಿಂ 12 ಸಾವಿರ ಹಾಗೂ ಇತರ ಸಮುದಾಯಗಳು 35,776 ಮತದಾರರಿದ್ದು ಇವರನ್ನು ಸೆಳೆಯುವ ಪ್ರಯತ್ನ ಪ್ರಬಲ ಆಕಾಂಕ್ಷಿಗಳಿಂದ ಸದ್ಯ ನಡೆಯುತ್ತವೆ.

ಈವರೆಗೂ ನಡೆದ 15 ಚುನಾವಣೆಗಳಲ್ಲಿ 7 ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಕಂಡಿದ್ದರೆ, ಕಾಂಗ್ರೆಸ್ 5 ಬಾರಿ 3 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಮೂವರು ಸಚಿವರನ್ನು ರಾಜ್ಯಕ್ಕೆ ನೀಡಿದ್ದು ಈ ಕ್ಷೇತ್ರದ ವಿಶೇಷ. ಹ್ಯಾಟ್ರಿಕ್ ಜಯದ ದಾಖಲೆ ಬರೆದ ಹಾಲಿ ಶಾಸಕ ಸಾ.ರಾ.ಮಹೇಶ್ ಮತ್ತೆ ಗೆದ್ದು ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ. ಉಳಿದಂತೆ ಜನತಾ ಪರಿವಾರದ ಎಸ್.ನಂಜಪ್ಪ, ಕಾಂಗ್ರೆಸ್‌ನಿಂದ ಗೆದ್ದಿದ್ದ ಹೆಚ್​.ಎಂ.ಚನ್ನಬಸಪ್ಪ ಮತ್ತು ಹೆಚ್​.ವಿಶ್ವನಾಥ್ ಅವರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿಯೂ ಸಫಲರಾಗಿದ್ದು ಕ್ಷೇತ್ರದ ಇತಿಹಾಸ.

ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ: ಕಾಂಗ್ರೆಸ್​ನಿಂದ ಅಧಿಕೃತವಾಗಿ ಅಭ್ಯರ್ಥಿ ಪ್ರಕಟವಾಗಿಲ್ಲವಾದರೂ, ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡರ ಪುತ್ರ, ಜಿ.ಪಂ ಮಾಜಿ ಸದಸ್ಯ ಡಿ.ರವಿಶಂಕರ್ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ. ಆದರೆ, ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯ ಮಹದೇವ್‌ ಹಾಗೂ ಪಕ್ಷದ ಮುಖಂಡ ಬಾಬು ಹನುಮಾನ್ ಕೂಡ ಟಿಕೆಟ್​ ಮೇಲೆ ಕಣ್ಣಿಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್‌ ಆಪ್ತ ಬಾಬು ಹನುಮಾನ್‌ ಅವರನ್ನು ಕರೆ ತರಲು ಬಿಜೆಪಿ ಬಲೆ ಬೀಸಿದ್ದರೆ, ಇತ್ತ ಸಾರಾ ಬೆಂಬಲಿಗರು ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೈ ಹಾಗೂ ತೆನೆ ಪಕ್ಷಗಳ ನಡುವೆ ಸ್ಥಳೀಯ ಮುಖಂಡರು ಪಕ್ಷ ಪರ್ಯಟನೆ ನಡೆಸುವ ಮೂಲಕ ರಾಜಕೀಯ ಬಿರುಸುಗೊಂಡಿದೆ. ಈ ನಡುವೆ ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್, ಮತ್ತೊಂದೆಡೆ ಜಿಲ್ಲಾ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮತ್ತು ಬಿಜೆಪಿ ಜಿಲ್ಲಾ ವಕ್ತಾರ ಗೋಪಾಲ್ ಅವರ ಪತ್ನಿ ಹೆಚ್​.ಜಿ.ಶ್ವೇತಾ ಗೋಪಾಲ್‌, ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

Calculation Of Assembly Constituenc
ಕೆ ಆರ್ ನಗರ ಮತಕ್ಷೇತ್ರ

ಆದರೆ, ಅಂತಿಮ ಕಣದಲ್ಲಿ ತೆನೆ ಹಾಗೂ ಕೈ ನಡುವೆ ನಡೆಯಲಿದ್ದು, ಮತದಾರರ ತೀರ್ಪು ಮಾತ್ರ ಗೌಪ್ಯವಾಗಿ ಕೊನೆ ಕ್ಷಣದ ಕೂತೂಹಲವನ್ನು ಉಳಿಸಿಕೊಂಡಿದೆ. ಇತರ ನಾಯಕರ ಪ್ರಭಾವ ಕ್ಷೇತ್ರದ ಮೇಲೆ ಅನೇಕರ ವರ್ಚಸ್ಸು ಸಹ ಮತಗಳಾಗಿ ಪರಿವರ್ತನೆ ಆಗಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕೊನೆ ಕ್ಷಣದ ಅಂಚೆ ಮತದಾನದ ಮೂಲಕ ಸಾರಾ ಮಹೇಶ್‌ ಗೆಲುವಿನ ನಗೆ ಬೀರಿದರು. ಅದರ ಹಿಂದೆ ಜೆಡಿಎಸ್​​ನ ಅನೇಕ ಸ್ಥಳೀಯ ಮುಖಂಡರು ಕೈ ಎತ್ತಿದ್ದು ಇದಕ್ಕೆ ಕಾರಣವಾಗಿತ್ತು. ಆದರೆ, ಈ ಭಾಗದ ಪ್ರಮುಖ ಪ್ರಭಾವಿ ವಿಶ್ವನಾಥ್‌ ನಡೆ ಕೂಡ ಈ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಅಂತೆಯೇ ಸಿದ್ದರಾಮಯ್ಯ ವರ್ಚಸ್ಸನ್ನು ಮುಂದಿಟ್ಟುಕೊಂಡು ಮತ ಬೇಟೆಗೆ ತಯಾರಿ ನಡೆಸಿರುವ ಕಾಂಗ್ರೆಸ್​​ ಅಭ್ಯರ್ಥಿ ರವಿಶಂಕರ್‌ ಕೂಡ ಸಮೀಪದ ದೊಡ್ಡಯ್ಯ-ಚಿಕ್ಕಯ್ಯ ದೇವರ ಮೊರೆ ಹೋಗಿದ್ದು, ಕ್ಷೇತ್ರದಲ್ಲಿ ಹವಾ ಸೃಷ್ಟಿಸಲು ಮುಂದಾಗಿದ್ದಾರೆ

ಮತದಾರರ ವಿವರ: ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,04,115, ಅದರಲ್ಲಿ ಪುರುಷರು 1,02,445, ಮಹಿಳೆಯರು 1,01,659 ಹಾಗೂ ಇತರೆ 1 ಮತದಾರರು ಇದ್ದಾರೆ.

ಇಲ್ಲಿಯವರೆಗೆ ಗೆದ್ದವರ ಮಾಹಿತಿ:

1952 : ಸಾಲಿಗ್ರಾಮ ಹನುಮಂಡೇಗೌಡರ ತಮ್ಮಯ್ಯ (ಪಕ್ಷೇತರ)
1957 : ಹೆಚ್.ಎಂ.ಚನ್ನಬಸಪ್ಪ (ಕಾಂಗ್ರೆಸ್‌)
1962 : ಕೆ.ಎಸ್.ಗೌಡಯ್ಯ (ಪಕ್ಷೇತರ)
1967 : ಬಿ.ಬಸವರಾಜು (ಪಕ್ಷೇತರ)
1972 : ಹೆಚ್.ಬಿ.ಕೆಂಚೇಗೌಡ (ಕಾಂಗ್ರೆಸ್‌)
1978 : ಹೆಚ್.ವಿಶ್ವನಾಥ್ (ಕಾಂಗ್ರೆಸ್‌)
1983 : ಎಸ್.ನಂಜಪ್ಪ (ಜನತಾಪಕ್ಷ)
1985 : ಎಸ್.ನಂಜಪ್ಪ (ಜನತಾಪಕ್ಷ)
1989 : ಹೆಚ್.ವಿಶ್ವನಾಥ್ (ಕಾಂಗ್ರೆಸ್‌)
1994 : ಎಸ್.ನಂಜಪ್ಪ (ಜೆಡಿಎಸ್‌)
1999 : ಎಚ್‌.ವಿಶ್ವನಾಥ್‌ (ಕಾಂಗ್ರೆಸ್‌)
2004 : ಮಹದೇವ (ಜೆಡಿಎಸ್‌)
2008 : ಸಾ.ರಾ.ಮಹೇಶ್ (ಜೆಡಿಎಸ್‌)
2013 : ಸಾ.ರಾ.ಮಹೇಶ್ (ಜೆಡಿಎಸ್‌)
2018 : ಸಾ.ರಾ.ಮಹೇಶ್ (ಜೆಡಿಎಸ್‌)

ಇದನ್ನೂ ಓದಿ: ದಕ್ಷಿಣ ಕನ್ನಡದ ಕುತೂಹಲದ ಕ್ಷೇತ್ರ ಬಂಟ್ವಾಳ: ಮಾಜಿ ಸಚಿವ-ಹಾಲಿ ಶಾಸಕರ ಮಧ್ಯೆ ಬಿಗ್ ಫೈಟ್

Last Updated : Mar 15, 2023, 11:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.