ಮೈಸೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂಟು ಮಂದಿ ಯುವಕರನ್ನು ನಗರದ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜೆಪಿ ನಗರದ ಬಸ್ ನಿಲ್ದಾಣದ ಬಳಿಯ ಟೀ ಅಂಗಡಿ ಹಿಂಭಾಗ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಗುರುಪ್ರಸಾದ್, ಅರುಣ್, ಪವನ್, ವಿನೋದ್, ವಿನೋದ್ ರಾಜ್, ಗಜೇಂದ್ರ, ಮೋಹನ್ ಬಂಧಿತ ಆರೋಪಿಗಳು. ಇವರಿಂದ 9,810 ರೂ. ಹಾಗೂ 8 ಮೊಬೈಲ್ ಮತ್ತು 5 ಬೈಕ್ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.