ಮೈಸೂರು: ಪ್ಲಾಸ್ಟಿಕ್ ಸಮಸ್ಯೆಗೆ ಪರ್ಯಾಯವಾಗಿ ಪರಿಸರಸ್ನೇಹಿ ಬ್ಯಾಗ್ಗಳ ಉತ್ಪಾದನೆ ತಂತ್ರಜ್ಞಾನವನ್ನು DFRL (ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ) ಕಂಡುಹಿಡಿದಿದ್ದು, ಇದರ ಬಳಕೆಯ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು. ಈ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಉಪಯೋಗವಾಗಲೆಂದು ಬಿಡುಗಡೆ ಮಾಡಲಾಯಿತು.
DFRL ನ ಈ ತಂತ್ರಜ್ಞಾನದಿಂದ ಪರಿಸರಸ್ನೇಹಿ ಬ್ಯಾಗ್, ಸ್ಟ್ರಾ, ಬೌಲ್‌ಗಳು, ಪ್ಲೇಟ್ ಇತ್ಯಾದಿಗಳನ್ನು ಉತ್ಪಾದಿಸುತ್ತಿದ್ದು, ಬಳಸಿದ ನಂತರ 180 ದಿನಗಳಲ್ಲಿ ಸ್ವಾಭಾವಿಕವಾಗಿ ವಾತಾವರಣದಲ್ಲಿ ಕರಗುತ್ತವೆ. ಇಲ್ಲದಿದ್ದರೆ ಬಯೋ ಟ್ರೀಟ್ಮೆಂಟ್ ಪ್ಲಾಂಟ್ನಲ್ಲಿ ಹಾಕಿದರೆ 45 ರಿಂದ 60 ದಿನಗಳಲ್ಲಿ ಕೊಳೆಯುತ್ತದೆ. ನೂತನ ತಂತ್ರಜ್ಞಾನದಲ್ಲಿ ಬಯೋ ಡಿಗ್ರೆಡಬಲ್ 5 ಕೆಜಿ ಕ್ಯಾರಿ ಬ್ಯಾಗ್ ತಯಾರಿಸಲಾಗಿದೆ. ಇದು ಜನಸಾಮಾನ್ಯರ ದಿನನಿತ್ಯದ ಬಳಕೆ ಹಾಗೂ ರೈತರಿಗೆ ಅನುಕೂಲ ಆಗುತ್ತದೆ. ಇದು ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿದ್ದು ಉಪಯುಕ್ತ ಎನ್ನುತ್ತಾರೆ ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಸಂತೋಷ್ ಕುಮಾರ್.
ಇದನ್ನೂ ಓದಿ: ಮೈಸೂರಿನ ಡಿಎಫ್ಆರ್ಎಲ್ ಸಂಸ್ಥೆಯಿಂದ ಪರಿಸರಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಸಂಶೋಧನೆ