ಮೈಸೂರು: ಶುಕ್ರವಾರ ಸಂಜೆ 5 ಗಂಟೆ 18 ನಿಮಿಷಕ್ಕೆ ಸಂಭವಿಸಿದ ಭೂ ಕಂಪನದ ತೀವ್ರತೆ 2.9ರಷ್ಟಿತ್ತು ಎಂದು ಕೆ.ಆರ್. ನಗರ ತಾಲೂಕಿನ ತಹಶೀಲ್ದಾರ್ ಮಂಜುಳಾ ಹೇಳಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು, ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೂ ಕಂಪನ ಜನರಲ್ಲಿ ಆತಂಕ ಮೂಡಿಸಿದೆ. ಕರ್ನಾಟಕ ರಾಜ್ಯ ನ್ಯಾಷನಲ್ ಡಿಸಾಸ್ಟರ್ ಸೆಂಟರ್ನಿಂದ ಬಂದಿರುವ ಮಾಹಿತಿಯಲ್ಲಿ ಭೂ ಕಂಪನದ ತೀವ್ರತೆಯನ್ನ ತಿಳಿಸಲಾಗಿದೆ. ಅರಕಲಗೂಡು ಮತ್ತು ಕೆ.ಆರ್. ನಗರದ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಭೂಕಂಪ ಸಂಭವಿಸಿದೆ.
ಇದು ಪ್ರಕೃತಿ ವಿಕೋಪದ ಮೇಲ್ವಿಚಾರಣಾ ಕೇಂದ್ರದಿಂದ ಬಂದಿರುವ ಮಾಹಿತಿಯಾಗಿದೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ 30 ವರ್ಷಗಳ ಹಿಂದೆ ಈ ರೀತಿ ಅನುಭವಾಗಿತ್ತು. ಈ ಕಂಪನ ಅಷ್ಟೊಂದು ತೀವ್ರತೆ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.