ಮೈಸೂರು: ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ಕಾಂಗ್ರೆಸ್ - ಜೆಡಿಎಸ್ ಶಾಸಕರು ರಾಜೀನಾಮೆ ಪರ್ವ ಮುಂದುವರಿಯುತ್ತಿದ್ದಂತೆ ಕೇಂದ್ರ ಸಚಿವ ಡಿವಿ ಸಂದಾನದಗೌಡ ಪ್ರತಿಕ್ರಿಯೆ ನೀಡಿದ್ದು, ಪಕ್ಷದಿಂದ ಹೊರಬರಲು ಇದು ಸರಿಯಾದ ಸಮಯ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಶಾಸಕರಾಗಿ ಉಳಿದುಕೊಳ್ಳುವುದು ಸರಿಯಲ್ಲ ಎಂಬ ಭಾವನೆ ಇದೀಗ ಅವರಲ್ಲಿ ಮೂಡಿದೆ. ಜತೆಗೆ ತಮ್ಮ ಕ್ಷೇತ್ರ ಹಾಗೂ ರಾಜ್ಯದ ಹಿತದೃಷ್ಠಿಯಿಂದ ಹೆಚ್ಚು ದಿನ ಶಾಸಕರಾಗಿ ಮುಂದುವರಿಯುವುದು ಒಳ್ಳೆಯದಲ್ಲ ಎಂದು ಅವರ ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಾ ಎಂದು ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ರಾಜ್ಯಪಾಲರೇ ಸುಪ್ರೀಂ ಆಗಿದ್ದು, ಸಂವಿಧಾನದ ಪ್ರಕಾರ ಅವರು ನಮ್ಮ ಪಕ್ಷಕ್ಕೆ ಆಫರ್ ನೀಡಿದರೇ ಸರ್ಕಾರ ರಚನೆ ಮಾಡಲು ನಮ್ಮ ಪಕ್ಷ ಸಿದ್ಧರವಾಗಿದೆ. ರಾಜ್ಯದಲ್ಲಿ ನಾವು ಏಕೈಕ ಅತಿದೊಡ್ಡ ಪಕ್ಷ, ನಮ್ಮೊಂದಿಗೆ ಈಗಾಗಲೇ 105 ಜನ ಶಾಸಕರಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಕನ್ಫರ್ಮ್ ಎಂದು ಇದೇ ವೇಳೆ ಸದಾನಂದಗೌಡ ತಿಳಿಸಿದ್ದಾರೆ.