ಮೈಸೂರು: ಜಾತ್ರೆ, ಸಮಾರಂಭ, ಧಾರ್ಮಿಕ ಕಾರ್ಯಗಳು ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳನ್ನು ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದ್ರೂ ಜಿಲ್ಲಾಡಳಿತದ ಆದೇಶ ಲೆಕ್ಕಿಸದೇ ಜಿಲ್ಲೆಯ ಮೂಗೂರು ಗ್ರಾಮದಲ್ಲಿ ಅದ್ಧೂರಿಯಾಗಿ ಬಂಡಿ ಉತ್ಸವ ನೆರವೇರಿಸಲಾಗಿದೆ.
ಮೈಸೂರಿನ ತಿ. ನರಸೀಪುರ ತಾಲೂಕಿನಲ್ಲಿರುವ ಮೂಗೂರು ಗ್ರಾಮದಲ್ಲಿ ಮೂಗೂರು ಜಾತ್ರೆ ನಡೆಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ, ಸರ್ಕಾರದ ಗೈಡ್ ಲೈನ್ಸ್ ಹಾಗೂ ಜಿಲ್ಲಾಡಳಿತದ ನಿರ್ಧಾರಕ್ಕೆ ಡೋಂಟ್ ಕೇರ್ ಎಂದಿರುವ ಮೂಗೂರಿನ ಜನ ಜಾತ್ರೆ ನಡೆಸಿದ್ದಾರೆ.
ಇದನ್ನೂ ಓದಿ: ನಂಜುಂಡೇಶ್ವರ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ.. ಭಕ್ತಿಯಲ್ಲಿ ಮರೆಯಾಯ್ತು ಕೊರೊನಾ ರೂಲ್ಸ್!
ಹಬ್ಬ, ಜಾತ್ರೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಬಂಡಿ ಉತ್ಸವ ನಡೆದಿದೆ. ಮೂಗೂರು ಬಂಡಿ ಉತ್ಸವ ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಇಲ್ಲದೆ ಬಂಡಿ ಉತ್ಸವವನ್ನು ಜನತೆ ನಡೆಸಿದ್ದಾರೆ. ಇದನ್ನು ನೋಡಿ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿತ್ತು.