ಮೈಸೂರು: ಕೊವೀಡ್-19 ಭೀತಿ ಹಿನ್ನೆಲೆ 21 ದಿನಗಳ ಕಾಲ ಯಾರೂ ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ತಿ.ನರಸೀಪುರ ತಾಲೂಕಿನ ಗ್ರಾಮವೊಂದರ ಜನರು ಮನವಿ ಮಾಡಿದ್ದಾರೆ.
ತಾಲೂಕಿನ ಬಾಬು ಜಗಜೀವನ ಗ್ರಾಮದ ಜನರು, ಗ್ರಾಮದ ಒಳಗೆ ಯಾರೂ ಬರಬಾರದು ಎಂದು ಬೋರ್ಡ್ ಹಾಕಿದ್ದಾರೆ. ಅಲ್ಲದೇ ಗ್ರಾಮದ ಮುಖ್ಯ ದ್ವಾರದಲ್ಲಿ ಮುಳ್ಳಿನ ಬೇಲಿ ಹಾಕಿದ್ದಾರೆ. 21 ದಿನಗಳ ಕಾಲ ಜನರು ತಮ್ಮ ತಮ್ಮ ಮನೆಯಲ್ಲಿಯೇ ಇರಬೇಕು. ಅನಗತ್ಯವಾಗಿ ಯಾರೂ ಓಡಾಡಬೇಡಿ. ಮಹಾಮಾರಿ ಕೊರೊನಾ ವೈರಸ್ ಹೋಗಲಾಡಿಸಲು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.