ಮೈಸೂರು: ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು 21 ವರ್ಷದ ಹಿಂದೆ ಹೇಗಿದ್ದರು ಗೊತ್ತಾ?. ಅಶ್ವತ್ಥ ನಾರಾಯಣ್ ಅವರ ಇಲಾಖೆಯ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸೌಮ್ಯ ಎನ್ನುವವರ ಬಂಧನವಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಮೂವರು ಪಿ ಎಸ್ಐಗಳ ನೇಮಕಾತಿ ಸಂಬಂಧ ಸಚಿವ ಅಶ್ವತ್ಥ ನಾರಾಯಣ್ ಸಹೋದರ 80 ಲಕ್ಷ ರೂಪಾಯಿ ಡೀಲ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಪಿಎಸ್ಐ 5 ಹುದ್ದೆಗಳು ಅಶ್ವತ್ಥ ನಾರಾಯಣ್ರ ಸಹೋದರ ಸತೀಶ್ ಮೂಲಕ ಭರ್ತಿಯಾಗಿರುವ ಬಗ್ಗೆ ಮಾಹಿತಿಯಿದೆ. ಶಿಕ್ಷಕರ ನೇಮಕಾತಿಯಲ್ಲೂ ಸುಮಾರು 850 ಕೋಟಿ ಅವ್ಯವಹಾರ ನಡೆದಿದೆ. 6,000 ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಈ ಅವ್ಯವಹಾರ ನಡೆದಿದೆ. ನೀವು ತಪ್ಪೇ ಮಾಡದಿದ್ದರೇ ಪೊಲೀಸ್ ಅಧಿಕಾರಿಗಳಿಗೆ ಏಕೆ ಧಮ್ಕಿ ಹಾಕುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 2014ಕ್ಕಿಂತಲೂ ಮೊದಲು ಅಂತಾರಾಷ್ಟ್ರೀಯ ಕ್ರೀಡೆಗಳ ಪದಕ ಪಟ್ಟಿಯಲ್ಲಿ ಭಾರತದ ಹೆಸರೇ ಇರ್ತಿರಲಿಲ್ಲ: ಅಮಿತ್ ಶಾ
ಬೆಳಗಾವಿಯಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆ ಮಾಲೀಕ ರಮೇಶ್ ಜಾರಕಿಹೊಳಿಯವರು ಕಳೆದ 2008 ರಿಂದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕುಗಳಿಂದ ಒಟ್ಟು 610 ಕೋಟಿ ಸಾಲ ಪಡೆದಿದ್ದಾರೆ. 2016-17 ಸಾಲಿನವರೆಗೂ ಸಾಲದ ಕಂತು ಕಟ್ಟಿಲ್ಲ ಎಂದು ಆರೋಪಿಸಿದರು. ಕಳೆದ 2017 ರಲ್ಲಿ ಕೇಂದ್ರ ಸರ್ಕಾರ ಸಹಕಾರಿ ಬ್ಯಾಂಕ್ನಲ್ಲಿ ಪಡೆದಿದ್ದ ಸಾಲಗಳನ್ನು ಮನ್ನಾ ಮಾಡಲಾಗಿದೆ.
ಇದೇ ವೇಳೆ, ರಮೇಶ್ ಜಾರಕಿಹೊಳಿಯವರು ಪಡೆದಿದ್ದ ಸಾಲವೂ ಮನ್ನಾ ಮಾಡಲು ಯತ್ನಿಸಲಾಗಿದೆ. ಇದರಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪಾಲುದಾರರಾಗಿದ್ದಾರೆ. ಈ ಕುರಿತು ಕೇಂದ್ರ ಸಹಕಾರ ಸಚಿವರಾಗಿರುವ ಅಮಿತ್ ಶಾ ಅವರು ಏಕೆ ಧ್ವನಿ ಎತ್ತುತ್ತಿಲ್ಲ.ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.