ETV Bharat / state

ಧ್ರುವನಾರಾಯಣ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಶಿವಕುಮಾರ್: ವಿಡಿಯೋ

ನನ್ನ ಹಾಗೂ ಧ್ರುವನಾರಾಯಣ ಅವರ ಸ್ನೇಹವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ನನಗೆ ಕೇವಲ ಕಾರ್ಯಾಧ್ಯಕ್ಷರಾಗಿರಲ್ಲಿಲ್ಲ. ನನ್ನ ಸಹೋದರನಂತೆ ಕುಟುಂಬದ ಸದಸ್ಯರಾಗಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು

dk-sivakumar-cried-in-front-of-dhruvanarayan-body
ಧ್ರುವನಾರಾಯಣ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಡಿ.ಕೆ.ಶಿವಕುಮಾರ್: ವೀಡಿಯೋ
author img

By

Published : Mar 11, 2023, 9:14 PM IST

Updated : Mar 11, 2023, 9:21 PM IST

ಧ್ರುವನಾರಾಯಣ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಡಿ.ಕೆ.ಶಿವಕುಮಾರ್

ಮೈಸೂರು/ಬೆಂಗಳೂರು: ತೀವ್ರ ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣಿರಿಟ್ಟು‌ ಬಿಕ್ಕಿ ಬಿಕ್ಕಿ ಅತ್ತರು. ಧ್ರುವನಾರಾಯಣ್ ಅವರ ಅಂತಿಮ‌ ದರ್ಶನ ಪಡೆಯಲು, ಅವರ ಮನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಸಂಸದ ಡಿ.ಕೆ.ಸುರೇಶ್ ಮೈಸೂರಿನಲ್ಲಿ ಧ್ರುನಾರಯಣ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕಣ್ಣೀರು ಹಾಕಿದ ಡಿ.ಕೆ.ಶಿವಕುಮಾರ್: ಧ್ರುವನಾರಾಯಣ್ ಪಾರ್ಥಿವ ಶರೀರ ಅವರ ಮನೆಯಿಂದ ಕಾಂಗ್ರೆಸ್ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸುವ ಮುನ್ನ, ಮನೆ ಬಳಿ ಸಂಸದ ಡಿ ಕೆ. ಸುರೇಶ್, ಧ್ರುವನಾರಾಯಣ ಅವರ ಪಾರ್ಥಿವ ಶರೀರದ ಮುಂದೆ ಕಂಬನಿ ಹಾಕಿದರೆ, ಇತ್ತ ಪಾರ್ಥಿವ ಶರೀರ ಮೈಸೂರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ವೇಳೆ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೃವನಾರಾಯಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್​, ತಮಗೆ ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿಭಾಯಿಸಿ ಪಕ್ಷಕ್ಕೆ ನಿಷ್ಠೆ ಮೆರೆದಿದ್ದರು. ಅಷ್ಟೇ ಏಕೆ ಅವರು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಇದ್ದರು. ನಮ್ಮ ಕಾರ್ಯಾಧ್ಯಕ್ಷರಾಗಿ ಕೋವಿಡ್ ಸಮಯದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ, ಅವರ ಬದ್ಧತೆ ಅವಿಸ್ಮರಣೀಯ ಎಂದು ಬಣ್ಣಿಸಿದರು.

ನನ್ನ ಹಾಗೂ ಧ್ರುವನಾರಾಯಣ ಅವರ ಸ್ನೇಹವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ನನಗೆ ಕೇವಲ ಕಾರ್ಯಾಧ್ಯಕ್ಷರಾಗಿರಲ್ಲಿಲ್ಲ. ನನ್ನ ಸಹೋದರನಂತೆ ಕುಟುಂಬದ ಸದಸ್ಯರಾಗಿದ್ದರು. ನನ್ನ ರಾಜಕೀಯ ಪಯಣದಲ್ಲಿ ಧ್ರುವನಾರಾಯಣ ಅವರು ನನ್ನ ಜತೆ ಹೆಜ್ಜೆ ಹಾಕಿದ್ದರು. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು ಜಿಲ್ಲೆಗಳ ಉಸ್ತುವಾರಿ ಹೊತ್ತು, ಪಕ್ಷದಲ್ಲಿನ ಸಮಸ್ಯೆ ಬಗೆಹರಿಸಿಕೊಂಡು ಬರುತ್ತಿದ್ದರು ಎಂದು ಹೇಳಿದರು.

ನಂಜನಗೂಡು ಕಡೆ ಹೋರಾಟ ಪಾರ್ಥಿವ ಶರೀರ: ಸಂಜೆ ಕಾಂಗ್ರೆಸ್ ಕಛೇರಿಯಿಂದ ಧ್ರುವನಾರಾಯಣ್ ಅವರ ಪಾರ್ಥಿವ ಶರೀರ ನಂಜನಗೂಡು ಕಡೆ ಹೊರಟಿತು, ನಂಜನಗೂಡಿನಲ್ಲಿ ಪಾರ್ಥಿವ ಶರೀರವನ್ನು ಸ್ಥಳಿಯರ ಅಂತಿಮ ದರ್ಶನಕ್ಕಾಗಿ ಇಟ್ಟು, ರಾತ್ರಿಯೇ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮಕ್ಕೆ ತೆಗೆದುಕೊಂಡು ಹೊಗಲಾಗುವುದು. ಅಲ್ಲಿ ನಾಳೆ ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನದವರೆಗೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಅಂತಿಮ ಸಂಸ್ಕಾರ ಕಾರ್ಯ ನೆರವೇರಿಸಲಾಗುವುದು. ಈ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನವರು ಸೋಲುತ್ತಿರುವುದು ಇವಿಎಂನಿಂದ ಅಲ್ಲ, ಜನರ ಸಂಕಲ್ಪದಿಂದ: ಸಂಸದ ತೇಜಸ್ವಿ ಸೂರ್ಯ

Last Updated : Mar 11, 2023, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.