ETV Bharat / state

ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಹುಣಸೂರು ನಗರಸಭೆ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರ ಆದೇಶ - ಕರ್ನಾಟಕ ಪುರಸಭೆಗಳ ಅಧಿನಿಯಮ ಕಾಯಿದೆ

ಹುಣಸೂರು ನಗರಸಭೆ ಸದಸ್ಯ ಎಚ್ ಪಿ ಸತೀಶ್​ಕುಮಾರ್​ನಿಂದ ಪೌರಾಯುಕ್ತ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ನಿಂದಿಸಿ ಹಲ್ಲೆಗೆ ಯತ್ನಿಸಿದ್ದ ಆರೋಪ ಸಾಬೀತು. ಸದಸ್ಯನ ಸದಸ್ಯತ್ವದಿಂದ ರದ್ದು ಮಾಡಿ ಮೈಸೂರು ಪ್ರಾದೇಶಿಕ ಅಯುಕ್ತರು ಆದೇಶ.

HP Satishkumar
ಹುಣಸೂರು ನಗರಸಭೆ ಸದಸ್ಯ ಎಚ್ ಪಿ ಸತೀಶ್​ಕುಮಾರ್
author img

By

Published : Mar 10, 2023, 4:48 PM IST

ಮೈಸೂರು: ಹುಣಸೂರು ನಗರಸಭೆಯ ಪೌರಾಯುಕ್ತ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೇ, ಪೌರಾಯುಕ್ತರನ್ನು ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದ ಘಟನೆ ಸಾಬೀತಾದ ಹಿನ್ನೆಲೆ ನಗರಸಭೆ ಸದಸ್ಯರೊಬ್ಬರ ಸದಸ್ಯತ್ವನ್ನು ಮೈಸೂರು ಪ್ರಾದೇಶಿಕ ಆಯುಕ್ತರು ವಜಾ ಮಾಡಿ ಅದೇಶ ಹೊರಡಿಸಿದ್ದಾರೆ. ನಗರಸಭೆ ವಾರ್ಡ್ ನಂ.೮(ಸದಾಶಿವನ ಕೊಪ್ಪಲು ಬಡಾವಣೆ)ರ ಸದಸ್ಯ ಎಚ್ ಪಿ ಸತೀಶ್ ಕುಮಾರ್ ವಜಾಗೊಂಡಿರುವ ಸದಸ್ಯರು.

2021ರ ನವೆಂಬರ್ 18ರಂದು ನಡೆದ ಪ್ರಕರಣವೊಂದಕ್ಕೆ ಸಂಬಂದಿಸಿದಂತೆ ಅಂದಿನ ಪೌರಾಯುಕ್ತ ರಮೇಶ್‌ರನ್ನು ಅಧ್ಯಕ್ಷರ ಕಚೇರಿಗೆ ಕರೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಹಲ್ಲೆಗೂ ಸಹ ಮುಂದಾಗಿದ್ದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತರು ಸಿ.ಸಿ.ಕ್ಯಾಮೆರಾ ಪೂಟೇಜ್‌ನೊಂದಿಗೆ ಸದಸ್ಯ ಎಚ್ ಪಿ ಸತೀಶ್‌ಕುಮಾರ್ ವಿರುದ್ದ ಪ್ರಕರಣ ದಾಖಲಿಸಿದ್ದರು.

ಅಲ್ಲದೇ 2021ರ ನವೆಂಬರ್ 24ರಂದು ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲದ ವೇಳೆಯಲ್ಲಿ ಕಚೇರಿ ಪ್ರವೇಶಿಸಿ ಎಂ.ಎ.ಅರ್-19 ಹಾಗೂ ಕಚೇರಿ ಕಡತ ಮತ್ತು ಪೈಲ್‌ಗಳನ್ನು ಪರಿಸಿಲಿಸುತ್ತಿರುವುದು, ಖಾತಾಪುಸ್ತಕದಲ್ಲಿ ಮದ್ಯಂತರ ಖಾತೆಗಳು ನೋಂದಣಿ ಆಗಿರುವ ಬಗ್ಗೆ ನಗರಸಭೆಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ನಗರಸಭೆಯ ಸಿಬ್ಬಂದಿ ಬೆದರಿಸಿ ಪೈಲ್ ಮತ್ತು ಕಡತಗಳನ್ನು ಒತ್ತಡ ಹೇರಿ ಅಕ್ರಮವಾಗಿ ಕೆಲವು ತಿದ್ದುಪಡಿಗೂ ಮುಂದಾಗಿದ್ದು. ಈ ಸಂಬಂಧ ಸಿಬ್ಬಂದಿಯ ಸುರಕ್ಷತೆ, ಅಕ್ರಮ ತಿದ್ದುಪಡಿ ವಿರುದ್ದ ಪೌರಾಯುಕ್ತರು ಮೇಲಧಿಕಾರಿಗಳಿಗೆ ದೂರು ಸಹ ನೀಡಿದ್ದರು. ಇತ್ತ ಸದಸ್ಯ ಸತೀಶ್‌ಕುಮಾರ್ 2021 ನವೆಂಬರ್ 8 ರಂದು ನಗರಸಭೆ ಪೌರಾಯುಕ್ತ ರಮೇಶ್ ಹಾಗೂ ಅಧಿಕಾರಿಗಳು ನಗರಸಭೆಯಲ್ಲಿ ಅಕ್ರಮ ನಡೆಸುತ್ತಿದ್ದಾರೆಂದು ಭಿತ್ತಿಪತ್ರಗಳನ್ನು ನಗರಸಭೆ ಬಾಗಿಲಿಗೆ ಅಂಟಿಸಿ ಒಂಟಿಯಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸಿದ್ದರು.

ಈ ಸಂಬಂಧ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ ಜೆ ಸಿ ಪ್ರಕಾಶ್‌ರವರು ಸುಧೀರ್ಘ ವಿಚಾರಣೆ ನಡೆಸಿ ವಿಚಾರಣೆ ವೇಳೆ ಸಾಕ್ಷಿ ಪುರಾವೆಗಳಾಗಿ ಸಿ ಸಿ ಕ್ಯಾಮೆರಾದ ಪೂಟೇಜ್, ಪೋಟೋ ಇನ್ನಿತರ ಸಾಕ್ಷಿಗಳನ್ನು ಪರಿಗಣಿಸಿ ಸದಸ್ಯರ ದುರ್ನಡೆತೆ ಮತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿರುವುದು ರುಜುವಾತ ಆಗಿದೆ. ಸದಸ್ಯತ್ವ ಸ್ಥಾನಕ್ಕೆ ಅಗೌರವಾಗಿ ನಡೆದುಕೊಂಡ ಕಾರಣ ಕರ್ನಾಟಕ ಪುರಸಭೆಗಳ ಅಧಿನಿಯಮ ಕಾಯಿದೆ ಪ್ರಕಾರ ಎಚ್ ಪಿ ಸತೀಶ್‌ಕುಮಾರ್‌ ಅವರ ಸದಸ್ಯತ್ವವನ್ನು ವಜಾಗೊಳಿಸಿ ಆದೇಶ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತೃತೀಯ ಲಿಂಗಿಗಳಿಗೆ ಮತದಾನ ಗುರುತಿನ ಚೀಟಿ ವಿತರಣೆ:ಮೈಸೂರು: ಹೆಣ್ಣು ಮತ್ತು ಗಂಡು ಅಲ್ಲದೇ ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಛಿಸುವವರಿಗೆ ಗುರುತಿನ ಚೀಟಿ ಒದಗಿಸಲಾಗುವುದು ಎಂದು ಡಿಸಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ ವಿ ರಾಜೇಂದ್ರ ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿಯಿಂದ, ಜಿ ಪಂ ದೇವರಾಜ ಅರಸು ಸುಭಾಂಗಣದಲ್ಲಿ, ತೃತೀಯ ಲಿಂಗಿ ಮತದಾರರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ 500ಕ್ಕೂ ಹೆಚ್ಚು ತೃತೀಯ ಲಿಂಗಿಗಳಿಗೂ ಮತದಾರರ ಚೀಟಿ ದೊರೆಯಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂಓದಿ:ಅಂತರ್ಜಾತಿ ಮದುವೆ ಆಗಿದ್ದಕ್ಕೆ ಬಹಿಷ್ಕಾರ ಪ್ರಕರಣ: 12 ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.