ETV Bharat / state

ಮೈಸೂರು : ಶಿಥಿಲಾವಸ್ಥೆಯಲ್ಲಿದ್ದ ಪಾರಂಪರಿಕ ಪೊಲೀಸ್ ಬ್ಯಾಂಡ್ ಹೌಸ್ ಕಟ್ಟಡ ನವೀಕರಣ ಕಾಮಗಾರಿ ಪೂರ್ಣ - ಮೈಸೂರು ಪಾರಂಪರಿಕ ಕಟ್ಟಡ

ಸಿಎಸ್​ಆರ್ ಯೋಜನೆಯಡಿ ಮೈಸೂರಿನ ಪಾರಂಪರಿಕ ಕಟ್ಟಡವಾದ ಪೊಲೀಸ್ ಬ್ಯಾಂಡ್ ಹೌಸ್ ನವೀಕರಣಕೊಂಡಿದೆ.

ಪಾರಂಪರಿಕ ಪೋಲಿಸ್ ಬ್ಯಾಂಡ್ ಹೌಸ್
ಪಾರಂಪರಿಕ ಪೋಲಿಸ್ ಬ್ಯಾಂಡ್ ಹೌಸ್
author img

By ETV Bharat Karnataka Team

Published : Jan 11, 2024, 3:51 PM IST

Updated : Jan 11, 2024, 4:50 PM IST

ಪಾರಂಪರಿಕ ಪೊಲೀಸ್ ಬ್ಯಾಂಡ್ ಹೌಸ್ ಕಟ್ಟಡ ನವೀಕರಣ

ಮೈಸೂರು : ನಗರದ ನಜರ್​ಬಾದ್ ಬಳಿ ಇರುವ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿದ್ದ ಪಾರಂಪರಿಕ ಕಟ್ಟಡವಾದ ಪೊಲೀಸ್ ಬ್ಯಾಂಡ್ ಹೌಸ್ ಕೆಲವು ವರ್ಷಗಳ ಹಿಂದೆಯೇ ಶಿಥಿಲಾವಸ್ಥೆಗೆ ತಲುಪಿತ್ತು. ಇದೀಗ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಸಂಪೂರ್ಣವಾಗಿ ನವೀಕರಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಈ ನವೀಕರಣ ಕಟ್ಟಡದಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್ ಸೇರಿದಂತೆ ಸಂಗೀತ ಪರಿಕರಗಳ ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ.

ಈ ಕುರಿತು ನಗರದ ಪುರಾತತ್ವ ಸಂಗ್ರಹಾಲಯ ಹಾಗೂ ಪಾರಂಪರಿಕ ಇಲಾಖೆಯ ಆಯುಕ್ತರಾದ ದೇವರಾಜ್‌ ಅವರು ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದರು. ಮೈಸೂರಿನಲ್ಲಿ 1920ರಲ್ಲಿ ನಿರ್ಮಿಸಿದ್ದ ಈ ಕಟ್ಟಡ 103 ವರ್ಷ ಪೂರೈಸಿದೆ. ಓಪನ್ ಬಾಲ್ಕನಿ, ಮಂಗಳೂರು ಹೆಂಚು, ಛಾವಣಿಯಿಂದ ಕೂಡಿದ ಕಟ್ಟಡದಲ್ಲಿ ಕಾಲಕ್ರಮೇಣ ಮೈಸೂರು ಪೊಲೀಸ್ ಆಯುಕ್ತರ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ ಹೊಸ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡಲಾಗಿತ್ತು.

ಬಿಎನ್​ಪಿಎಮ್ ಕಂಪನಿಯ ಸಹಭಾಗಿತ್ವದಲ್ಲಿ ನವೀಕರಣ ಕಾರ್ಯ : ಈ ಪಾರಂಪರಿಕ ಕಟ್ಟಡವನ್ನು ನವೀಕರಣ ಮಾಡಲು ಸಿಎಸ್​ಆರ್ ಯೋಜನೆಯಡಿ ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಲಿಮಿಟೆಡ್ ಮುಂದೆ ಬಂದಿತ್ತು. ಹೀಗಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೂಲಕ 2022 ರ ಫೆಬ್ರವರಿ 1 ರಂದು ಒಡಂಬಡಿಕೆ ಮಾಡಿಕೊಂಡು ಕಾಮಗಾರಿ ಆರಂಭಿಸಲಾಯಿತು. ಬಿಎನ್​ಪಿಎಮ್ ಇಂಡಿಯಾ ಸಂಸ್ಥೆಯು 64 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು, 51 ಲಕ್ಷ ರೂಪಾಯಿಗಳಲ್ಲಿ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ನೀಡಿತ್ತು.

2022 ರ ಮೇ 12 ರಂದು ಆರಂಭವಾದ ನವೀಕರಣ ಕಾರ್ಯವು ಇದೀಗ ಪೂರ್ಣ ಕಾಮಗಾರಿ ಮುಗಿದಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಛಾವಣಿಯ ಮುರಿದ ಹೆಂಚುಗಳನ್ನು ತೆಗೆದು ಹೊಸದಾಗಿ ಹಾಕಲಾಗಿದ್ದು, ಮಂಗಳೂರು ಟೈಲ್ಸ್, ಮರದ ತೊಲೆಗಳು, ಜಂತಿಗಳನ್ನು ಬದಲಾಯಿಸಲಾಗಿದೆ. ಶಿಥಿಲಗೊಂಡಿದ್ದ ಗೋಡೆಗೆ ಲೈಮ್ ಮೋರ್ಟರ್ ಗಾರೆಯಿಂದ ಪ್ಲಾಸ್ಟಿಂಗ್ ಮಾಡಿ ಮರದ ಕಿಟಕಿಗಳನ್ನು ಬದಲಾಯಿಸಲಾಗಿದೆ. ಗೋಡೆಗಳ ಒಳ ಮತ್ತು ಹೊರ ಭಾಗಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಅಗತ್ಯ ಇದ್ದ ಕಡೆ ಪಾಲಿಷ್ ಕೂಡ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಸ್ತು ಸಂಗ್ರಹಾಲಯಕ್ಕೆ ಚಿಂತನೆ : ಈಗ ನವೀಕರಣಗೊಂಡಿರುವ ಈ ಕಟ್ಟಡವನ್ನು ಸಂಗೀತ ಪರಿಕರಗಳ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಬೇಕು ಎಂದು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಮೈಸೂರು ಅರಮನೆಯಲ್ಲಿ ನುಡಿಸುತ್ತಿದ್ದ ಸಂಗೀತ ಸಲಕರಣೆಗಳನ್ನು ಈ ಮ್ಯೂಸಿಯಂನಲ್ಲಿ ಇರಿಸಿ, ವರ್ಷವಿಡಿ ಸಾರ್ವಜನಿಕರಿಗೆ ವೀಕ್ಷಿಸಲು ಮುಕ್ತ ಅವಕಾಶ ನೀಡಲು ತಯಾರಿ ನಡೆಸಲಾಗುತ್ತಿದೆ.

ಅಪರೂಪದ ಸಂಗೀತ ಸಲಕರಣೆಗಳು : ಪ್ರಸ್ತುತ ಮೌಂಟೆಡ್ ಕಂಪನಿಯಲ್ಲಿರುವ ಹಳೇ ಸಂಗೀತ ಪರಿಕರಗಳನ್ನು ನವೀಕೃತ ಪೊಲೀಸ್ ಬ್ಯಾಂಡ್ ಹೌಸ್​ಗೆ ಸ್ಥಳಾಂತರ ಮಾಡಲಾಗುತ್ತಿದೆ. ಕ್ಲಾರಿನೋನೆಟ್ಸ್ , ಪಿಕೋಲೋ, ಕೊಳಲು, ಓಬಾಯ್, ಬಾಸೂನ್, ಸ್ಯಾಕ್ಸೋ ಫೋನ್, ಟ್ರಂಪೆಲ್ ಗಳು, ಫ್ರೆಂಚ್ ಹಾರ್ನ್, ಸರ್ಕಲ್ ಬೇಸ್, ಯುಫೋನಿಯಂ, ಟ್ರಾಂಬೋನ್, ಡ್ರಮ್ ಗಳು, ಅಪರೂಪದ ಸಲಕರಣೆಗಳಾಗಿವೆ.

ಇದರ ಜೊತೆ ಕೆಲವು ಸಂಗೀತ ಸಲಕರಣೆಗಳಾದ ಪೈಕಿ ಪಿಯಾನೋ, ವಯಲಿನ್, ವಯೋಲೋ, ಸೆಲ್ಲೋ, ಡಬಲ್ ಬೇಸ್, ಹಾರ್ಪ್, ಬೇಸ್ ಸ್ಯಾಕ್ಸೋ ಫೋನ್, ಹಾರ್ನ್ ಸೆಲ್ಲೋ, ಟ್ಯೂಬಾಲಾರ -ಬೆಲ್ ಗಳು, ಡೀಗನ್, ಅರ್ಗನ್ ಪೈಪ್ಸ್, ಅರ್ಕಡಿಯಾನ್, ಗ್ಲೋಕನಸ್ಪಯಲ್, ಗ್ಸೈಲೋ ಫೋನ್ ಗಳಂತಹ ಇನ್ ಸ್ಟ್ರೂಮೆಂಟ್ಸ್ ಗಳನ್ನು ಸಂರಕ್ಷಿಸಲಾಗಿದ್ದು, ಅವುಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗುವುದು.

ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು? : ನಮ್ಮ ಹಳೇ ಬ್ಯಾಂಡ್ ಹೌಸ್​ ಪಾರಂಪರಿಕ ಕಟ್ಟಡವನ್ನು ಬಿಎನ್​ಪಿಎಮ್ ಇಂಡಿಯಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನವೀಕರಣ ಮಾಡಲಾಗಿದೆ. ಜನವರಿ 22 ರಂದು ಉದ್ಘಾಟನೆ ಮಾಡಲಾಗುವುದು. ಪಾರಂಪರಿಕ ಇಲಾಖೆಯವರು ಇಷ್ಟರಲ್ಲೇ ನವೀಕೃತ ಕಟ್ಟಡವನ್ನು ನಮಗೆ ಹಸ್ತಾಂತರ ಮಾಡಲಿದ್ದಾರೆ. ನಂತರ ಆ ಕಟ್ಟಡದಲ್ಲಿ ಖಾಯಂ ಆಗಿ ಕರ್ನಾಟಕ ಪೊಲೀಸ್ ಸಂಗೀತ ಪರಿಕರಗಳನ್ನು ಪ್ರದರ್ಶಿಸಿ, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವ ಉದ್ದೇಶ ಇದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಮ್ಯೂಸಿಯಂ ಅನ್ನು ಮುಕ್ತಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿವೆ 129 ಪಾರಂಪರಿಕ ಕಟ್ಟಡಗಳು : ಮೈಸೂರು ಜಿಲ್ಲೆಯಲ್ಲಿ ಸುಮಾರು 129 ಪಾರಂಪರಿಕ ಕಟ್ಟಡಗಳಿದ್ದು, ಇವುಗಳಲ್ಲಿ ಈ ಕಟ್ಟಡವೂ ಸಹ ಒಂದು. ಪ್ರತಿಯೊಂದು ಕಟ್ಟಡಗಳು ಎಲ್ಲರಿಗೂ ತಿಳಿದಿರುವಂತೆ ನಿರ್ವಹಣೆ ಕೊರತೆಯಿಂದ ಕೆಲವು ಕಟ್ಟಡಗಳು ಕುಸಿಯುತ್ತಿವೆ. ಈ ರೀತಿ ನಾವು ಸಿಎಸ್ ಆರ್ ಅಕ್ಟಿವಿಟೀಸ್​ನಲ್ಲಿ ಮೈಸೂರಿನ ಇಂಡಸ್ಟ್ರಿಗಳು ಏನಿದೆಯೋ ಅವರ ಸಹಯೋಗದಲ್ಲಿ ಮುಂದೆ ಬಂದು ಈ ರೀತಿಯ ಕೆಲಸಗಳನ್ನು ಮಾಡಬೇಕು. ಮೈಸೂರು ಜಿಲ್ಲೆಯ ಪಾರಂಪರಿಕ ಕಟ್ಟಡಗಳನ್ನು ಉಳಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆ ಈ ರೀತಿಯ ಕೈಗಾರಿಕೋದ್ಯಮಗಳು, ಖಾಸಗಿ ಕಂಪನಿಗಳು ಬಂದು ಕಟ್ಟಡಗಳನ್ನು ದತ್ತು ತೆಗೆದುಕೊಳ್ಳುವ ಮುಖಾಂತರ ಸಿಎಸ್​ಆರ್ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಾತತ್ವ ಸಂಗ್ರಹಾಲಯ ಹಾಗೂ ಪಾರಂಪರಿಕ ಇಲಾಖೆಯ ಆಯುಕ್ತರಾದ ದೇವರಾಜ್‌ ಹೇಳಿದರು.

ಪಾರಂಪರಿಕ ಕಟ್ಟಡ ದತ್ತು ತೆಗೆದುಕೊಳ್ಳುವ ಸ್ಕೀಮ್ : ಪಾರಂಪರಿಕ ಇಲಾಖೆ ವತಿಯಿಂದ ಕಟ್ಟಡಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನು ತರಲಾಗುತ್ತಿದೆ. ಮೈಸೂರು ಸುತ್ತಮುತ್ತಲಿನ ಪಾರಂಪರಿಕ ಕಟ್ಟಡಗಳನ್ನು ದತ್ತು ತೆಗೆದುಕೊಂಡು ನವೀಕರಣ ಮಾಡುವ ಮೂಲಕ ಸಂರಕ್ಷಣೆ ಮಾಡಿ ಪ್ರವಾಸಿಗರಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಅಲ್ಲಿ ಒದಗಿಸುವ ಮೂಲಕ ಪ್ರವಾಸಿ ತಾಣವಾಗಿ ಪರಿವರ್ತನೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಸ್ಮಾರಕಗಳ ಮೌಲ್ಯವನ್ನು, ಇತಿಹಾಸವನ್ನು ಸಂರಕ್ಷಣೆ ಮಾಡುವ ಕೆಲಸ ಆಗುತ್ತಿದೆ.

ಪಾರಂಪರಿಕ ಕಟ್ಟಡಗಳ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಎಂದರೆ ಸರ್ಕಾರದ ಕೆಟಿಟಿಪಿ ಆಕ್ಟ್ ಪ್ರಕಾರ ಈ ಪ್ರಕ್ಯೂರ್ ಮೆಂಟ್ ಅನ್ನು ಟೆಂಡರ್ ಕರೆಯುವ ಮುಖಾಂತರ ಮಾಡಲಾಗುತ್ತದೆ. ಇದರಲ್ಲಿ "ನಮ್ಮ ಸ್ಮಾರಕ" ಎಂಬ ಹೊಸ ವೆಬ್​ಸೈಟ್ ಮಾಡಲಾಗಿದೆ. ಅದರಲ್ಲಿ ಇಡೀ ರಾಜ್ಯಾದ್ಯಂತ 280 ಸ್ಮಾರಕಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಅದರ ಬಗ್ಗೆ ವೆಬ್​ಸೈಟ್​ನಲ್ಲಿ ಸಣ್ಣ ಪರಿಚಯ ನೀಡಲಾಗಿದೆ. ಜೊತೆಗೆ ಆ ಸ್ಮಾರಕಗಳಲ್ಲಿ ಅಗತ್ಯ ಇರುವ ಕಾಮಗಾರಿಗಳನ್ನು ಮತ್ತು ಮೂಲಭೂತ ಸೌಕರ್ಯಗಳ ವೆಚ್ಚಗಳ ಮಾಹಿತಿ ನೀಡಲಾಗಿದೆ.

ಆಸಕ್ತರು ಈ ವೆಬ್​ಸೈಟ್ ಅನ್ನು ನೋಡಿ, ಅದರಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ನಂತರ ಸ್ಟೇಟ್ ಎಂಪವರ್ ಮೆಂಟ್ ಕಮಿಟಿಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅನುಮೋದನೆ ಪಡೆದು, ದತ್ತು ಪಡೆಯುವವರಿಂದ ಒಂದು ಎಂಒವಿ ಮಾಡಿಕೊಳ್ಳಲಾಗುತ್ತದೆ.

ಈ ಎಂಒವಿ ಆದ ನಂತರ ದತ್ತು ಪಡೆದವರು ಆ ಪಾರಂಪರಿಕ ಕಟ್ಟಡವನ್ನು 5 ವರ್ಷಗಳ ಕಾಲ ನಿರ್ವಹಣೆ ಜೊತೆಗೆ, ಸಂರಕ್ಷಣೆ ಮಾಡಿ, ಅದರ ಮೂಲಕ ಇತಿಹಾಸ ಪಾರಂಪರಿಕ ಕಟ್ಟಡಗಳ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ಮಾಡಬಹುದಾಗಿದೆ. ಎನ್​ಆರ್​ಐಗಳು ಭಾರತದಲ್ಲಿರುವ ಕಂಪನಿಗಳ ಮುಖಾಂತರ, ಕಾಯ್ದೆ ಕಾನೂನಿನ ಅಡಿಯಲ್ಲಿ ದತ್ತು ತೆಗೆದುಕೊಳ್ಳಲು ಅವಕಾಶವಿದೆ.

ಇದನ್ನೂ ಓದಿ : ಶಿವರಾತ್ರೀಶ್ವರ ಶಿವಯೋಗಿಗಳ 1064ನೇ ಜಯಂತಿ: ವಿವಿಧ ಮಠಾಧೀಶರು, ಜಾವಗಲ್​ ಶ್ರೀನಾಥ್​ ಭಾಗಿ

Last Updated : Jan 11, 2024, 4:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.