ETV Bharat / state

ದೇವರಾಜ ಮಾರುಕಟ್ಟೆ 3 ದಿನ ಬಂದ್, ವ್ಯಾಪಾರಕ್ಕೆ ಬದಲಿ ವ್ಯವಸ್ಥೆ - ದೇವರಾಜ ಮಾರುಕಟ್ಟೆ 3 ದಿನ ಬಂದ್

ಜುಲೈ 29 ರಿಂದ 31ರವರೆಗೆ ಮೂರು ದಿನಗಳ ಕಾಲ‌ ದೇವರಾಜ ಮಾರುಕಟ್ಟೆಯ ಹೂವಿನ‌ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ..

Devaraja Market band
ನಾಳೆಯಿಂದ ಮೂರು ದಿನ ಕಾಲ ದೇವರಾಜ ಮಾರುಕಟ್ಟೆ ಬಂದ್
author img

By

Published : Jul 28, 2020, 4:35 PM IST

ಮೈಸೂರು : ಕೊರೊನಾ ಅಟ್ಟಹಾಸ ಮುಂದುವರೆದ ಹಿನ್ನೆಲೆ ನಾಳೆಯಿಂದ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆ ಬಂದ್ ಆಗಲಿದೆ.

ದೇವರಾಜ ಮಾರುಕಟ್ಟೆ 3 ದಿನ ಬಂದ್

ಮೈಸೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿವೆ. ಇದರ ನಡುವೆ ವರಮಹಾಲಕ್ಷ್ಮಿ ಹಬ್ಬ ಕೂಡ ಬಂದಿದೆ. ಹೆಚ್ಚಿನ ಜನರು ವ್ಯಾಪಾರಕ್ಕಾಗಿ ಮಾರುಕಟ್ಟೆಗೆ ಬರುವ ಕಾರಣ ಜನಸಂದಣಿ ನಿಯಂತ್ರಿಸುವ ಸಲುವಾಗಿ ಮುಚ್ಚಲಾಗಿದೆ. ಜುಲೈ 29 ರಿಂದ 31ರವರೆಗೆ ಮೂರು ದಿನಗಳ ಕಾಲ‌ ದೇವರಾಜ ಮಾರುಕಟ್ಟೆಯ ಹೂವಿನ‌ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ.

Devaraja Market band
ಆಯುಕ್ತರ ಪ್ರಕಟಣೆ

ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರಸ್ಥರ ಹಾಗೂ ನಗರದ ಜನತೆಯ ಅನುಕೂಲಕ್ಕಾಗಿ ಮೂರು ದಿನ ರೈಲ್ವೆ ನಿಲ್ದಾಣದ ಬಳಿಯ ಜೀವರಾಯನಕಟ್ಟೆ ಮೈದಾನದಲ್ಲಿ ಹೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.