ಮೈಸೂರು:ಸುಲಿಗೆ ಮಾಡಲು ಹೊಂಚು ಹಾಕಿದ್ದ 6 ಸುಲಿಗೆಕೋರರನ್ನು ಬಂಧಿಸಿಲಾಗಿದೆ. ಆರೋಪಿಗಳಿಂದ ₹5.68 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಿಸಿದ ವಾಹನವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಮಹದೇಶ್ವರ ಬಡಾವಣೆಯ ಮಂಜುನಾಥ್(23), ಕುಂಬಾರಕೊಪ್ಪಲಿನ ಮಂಜು(50), ಕೆಆರ್ ಮೊಹಲ್ಲಾದ ಶ್ರೀಧರ(35), ಬನ್ನೂರು ಪಟ್ಟಣದ ಇಮ್ರಾನ್ ಪಾಷ(38), ಮೇಟಗಳ್ಳಿ ನಾರಾಯಣ(35) ಹಾಗೂ ಸರಸ್ವತಿಪುರಂನ ಪುಟ್ಟರಾಜು(45) ಬಂಧಿತ ಆರೋಪಿಗಳಾಗಿದ್ದಾರೆ.
ಡಿ.12ರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ ವೃತ್ತದಿಂದ ಜಾವಾ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿನ ಹಂದಿ ಹಳ್ಳದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇವರು ಬನ್ನೂರು ಮತ್ತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದರು. ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ವೊಂದನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.