ETV Bharat / state

ನಂಜನಗೂಡು: ಬೀದಿ ನಾಯಿಗಳ ದಾಳಿಗೆ ಹೆದರಿ ಪೊಲೀಸ್ ಠಾಣೆಗೆ ನುಗ್ಗಿದ ಜಿಂಕೆ... ಪ್ರಾಥಮಿಕ ಚಿಕಿತ್ಸೆ ನೀಡಿದ ಪೊಲೀಸರು

Deer attacked by stray dogs: ಬೀದಿ ನಾಯಿಗಳ ದಾಳಿಗೆ ಹೆದರಿ ಪೊಲೀಸ್ ಠಾಣೆಗೆ ಜಿಂಕೆ ಓಡಿ ಬಂದಿದೆ. ಗಾಯಗೊಂಡಿದ್ದ ಜಿಂಕೆಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

attacked by stray dogs
ಬೀದಿ ನಾಯಿಗಳ ದಾಳಿಗೆ ಹೆದರಿ ಪೊಲೀಸ್ ಠಾಣೆಗೆ ಓಡಿ ಬಂದ ಜಿಂಕೆ...
author img

By ETV Bharat Karnataka Team

Published : Sep 28, 2023, 12:51 PM IST

Updated : Sep 28, 2023, 1:09 PM IST

ಪಶು ವೈದ್ಯಧಿಕಾರಿ ಶರಣಬಸಪ್ಪ ಮಾಹಿತಿ

ಮೈಸೂರು: ಬೆನ್ನು ಹತ್ತಿದ್ದ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಪೋಲಿಸ್ ಠಾಣೆಯೊಳಗೆ ಓಡೋಡಿ ಬಂದು ಆಶ್ರಯ ಪಡೆದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಗಾಯಗೊಂಡಿದ್ದ ಜಿಂಕೆಗೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಜಿಂಕೆಯೊಂದು ಪ್ರತ್ಯಕ್ಷವಾಗಿದೆ. ತಾಲೂಕಿನ ಜನರು ಜಿಂಕೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಜಿಂಕೆ ದಾರಿ ತಪ್ಪಿ ಬಂದು ನಗರದ ಹಲವು ಬಡಾವಣೆಗಳಲ್ಲಿ ಸುತ್ತಾಡಿದ್ದು, ಜನ ಮತ್ತು ವಾಹನ ಕಂಡು ವಿಚಲಿತವಾಗಿದ್ದು, ಇದೇ ವೇಳೆಯಲ್ಲಿ ನಗರದ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿವೆ.

ಬೆನ್ನು ಹತ್ತಿದ್ದ ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಪಕ್ಕದಲ್ಲಿರುವ ಪೋಲಿಸ್ ಠಾಣೆಯ ಮುಂದಿರುವ ಬ್ಯಾರಿಕೇಡ್ ಮೇಲೆ ಜಿಂಕೆ ಹಾರಿ, ಠಾಣೆಯೊಳಗೆ ನುಗ್ಗಿದೆ. ಅನಿರೀಕ್ಷಿತವಾಗಿ ಪ್ರತ್ಯಕ್ಷವಾದ ಜಿಂಕೆಯನ್ನು ನೋಡಿ ಪೊಲೀಸರು ಆಶ್ಚರ್ಯಗೊಂಡಿದ್ದಾರೆ. ಬೀದಿ ನಾಯಿಗಳು ಜಿಂಕೆಯ ಕತ್ತಿನ ಭಾಗ ಸೇರಿ ಮೂರ್ನಾಲ್ಕು ಕಡೆ ಕಚ್ಚಿವೆ. ಈ ವೇಳೆ ಪೊಲೀಸರು ಠಾಣೆಯ ಕೊಠಡಿಯಲ್ಲಿ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ರಕ್ತ ಸೋರುತ್ತಿದ್ದ ಜಾಗದಲ್ಲಿ ಅರಿಶಿಣದ ಪುಡಿಯನ್ನು ಹಚ್ಚಿದ್ದಾರೆ. ಇದರಿಂದ ರಕ್ತಸ್ರಾವ ಕಡಿಮೆಯಾಯಿತು.

ಜಿಂಕೆಗೆ ಚಿಕಿತ್ಸೆ ನೀಡಿದ ಪಶು ವೈದ್ಯರು: ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಶ್ರೀಕಂಟೇಶ್ವರ ದೇವಸ್ಥಾನದ ಹತ್ತಿರ ಒಂದು ಜಿಂಕೆಮರಿಯು ಪತ್ತೆಯಾಗಿದ್ದು, ಅದು ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ಜಿಂಕೆಗೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಫಾರೆಸ್ಟ್ ಗಾರ್ಡ್ ಎಲ್ಲರೂ ಸೇರಿಕೊಂಡು ಅದನ್ನು ಹಿಡಿದು ಪಶು ಆಸ್ಪತ್ರೆಗೆ ಚಿಕಿತ್ಸೆಗಾಗಿ ತಂದಿದ್ದರು. ಗಾಯಗೊಂಡಿದ್ದ 1.5 ವರ್ಷದ ಗಂಡು ಜಿಂಕೆಗೆ ಚಿಕಿತ್ಸೆ ನೀಡಲಾಯಿತು. ಮುಂದಿನ 7 ದಿನಗಳವರೆಗೆ ಜಿಂಕೆ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಲಾಗಿದೆ ಎಂದು ಪಶು ವೈದ್ಯಧಿಕಾರಿ ಶರಣಬಸಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ: ವಿಡಿಯೋ

ಹಿಂದೂ ಮಹಾಮಂಡಳದ ಗಣೇಶನ ನಿಮಜ್ಜನ ಮೆರವಣಿಗೆಗೆ ಸಜ್ಜಾದ ಶಿವಮೊಗ್ಗ: ಕೇಸರಿಮಯವಾದ ನಗರದಲ್ಲಿ ಗಮನ ಸೆಳೆಯುತ್ತಿರುವ ಉಗ್ರನರಸಿಂಹ

Last Updated : Sep 28, 2023, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.