ಮೈಸೂರು : ಹಳೇ ವೈಷಮ್ಯದ ಹಿನ್ನೆಲೆ ಬಾರ್ನಲ್ಲಿ ಕುಳಿತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಬನ್ನೂರಿನಲ್ಲಿ ನಡೆದಿದೆ. ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ದಯಾನಂದ್(29) ಎಂಬುವರು ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ಆರೋಪಿಗಳಾದ ಗುರು,ಬಿಂದಾಸ್,ಚಂದ್ರು ಹಾಗೂ ಇತರರು ಪರಾರಿಯಾಗಿದ್ದಾರೆ. ಬನ್ನೂರಿನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಯಾನಂದ್ ವೆಹಿಕಲ್ ಲೋನ್ ಸೆಟಲ್ಮೆಂಟ್ ಮಾಡಿಕೊಂಡು ಊಟ ಮಾಡುತ್ತಿದ್ದ ವೇಳೆ ಗುರು,ಬಿಂದಾಸ್,ಚಂದ್ರು ಸೇರಿದಂತೆ ಐದಾರು ಯುವಕರ ಗುಂಪು ಏಕಾಏಕಿ ದಾಳಿ ನಡೆಸಿದೆ.
ಇದನ್ನೂ ಓದಿ: ಮಹಾ ಆರತಿ ರದ್ದು : ಈದ್ ಹಬ್ಬಕ್ಕೆ ತೊಂದರೆ ಕೊಡಬಾರದು ಎಂದ ರಾಜ್ ಠಾಕ್ರೆ
ದಯಾನಂದ್ ಮೇಲೆ ಲಾಂಗ್ ಹಾಗೂ ಬಿಯರ್ ಬಾಟಲ್ಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.