ಮೈಸೂರು: ಇಂದು ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ. ಮುತ್ತುರಾಜ್ ಅವರು ಕ್ಯಾಪ್ಟನ್ ಅರ್ಜುನ ಮುಂದೆ ಫೋಟೊ ತೆಗೆಸಿಕೊಂಡರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಇವರು, ದಸರಾ ಮುಗಿಯುವವರೆಗೆ ಇರಬಹುದು ಎಂದು ಆಲೋಚಿಸಿದ್ದರು. ಆದರೆ ರಾಜ್ಯ ಸರ್ಕಾರ ಹಾಸನದ ಎಸ್.ಪಿ. ಆಗಿದ್ದ ಪ್ರಕಾಶ್ ಗೌಡ ಅವರನ್ನು ಡಿಸಿಪಿ ಆಗಿ ಮೈಸೂರಿಗೆ ವರ್ಗಾಯಿಸಿದೆ.
ಪ್ರಕಾಶ್ ಗೌಡ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ಮುತ್ತುರಾಜ್ ಅವರು ಬೇರೆಡೆ ತೆರಳಲಿದ್ದಾರೆ.