ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಚುನಾವಣೆ ನಂತರ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಅವರೀಗ ಇರುವ ಸ್ಥಾನ ಉಳಿಸಿಕೊಂಡರೆ ಸಾಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಹುಣಸೂರು ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆದ ಮಾದಿಗ ಸಮುದಾಯದ ಸಮಾವೇಶಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಜೆಡಿಎಸ್ ಅವರು ಇವಿಎಂ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸುತ್ತಅರೆ. ಕುಣಿಯಲಾರದವಳಿಗೆ ನೆಲ ಡೊಂಕು ಎಂಬಂತಿದೆ ಇವೆರಡು ಪಕ್ಷಗಳ ಸ್ಥಿತಿ. ಈ ರೀತಿ ಅನುಮಾನ ಪಡುವುದು ಪ್ರಜಾಪ್ರಭುತ್ವದ ಮೇಲೆ ಅನುಮಾನ ಪಟ್ಟಂತೆ ಎಂದರು.
ಇಂದಿರಾಗಾಂಧಿ ಅವರ ಆಡಳಿತಾವಧಿಯಲ್ಲಿ ಅವರು ಗೆಲ್ಲುತ್ತಿದ್ದರು. ಆಗ ಜನರು ಅದೇ ರೀತಿ ಅನುಮಾನ ಪಡುತ್ತಿದ್ದರಾ ಎಂದು ಕಾರಜೋಳ ಪ್ರಶ್ನಿಸಿದರು.