ETV Bharat / state

ಲಕ್ಷ್ಮಿ ಆನೆ ಗರ್ಭಿಣಿ ಎಂದು ನಿಜವಾಗಿಯೂ ಗೊತ್ತಿರಲಿಲ್ಲ: ಡಿಸಿಎಫ್ ಕರಿಕಾಳನ್ ಸ್ಪಷ್ಟನೆ - ಲಕ್ಷ್ಮಿ ಆನೆ

ನಿನ್ನೆ ಮಧ್ಯಾಹ್ನ ಲಕ್ಷ್ಮಿ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿತ್ತು. ಕೂಡಲೇ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಆರೋಗ್ಯವಾಗಿವೆ- ಡಿಸಿಎಫ್ ಕರಿಕಾಳನ್

DCF Karikalan Clarification
ಡಿಸಿಎಫ್ ಕರಿಕಾಳನ್ ಸ್ಪಷ್ಟನೆ
author img

By

Published : Sep 14, 2022, 2:16 PM IST

ಮೈಸೂರು: ಲಕ್ಷ್ಮಿ ಆನೆ ಗರ್ಭಿಣಿ ಎಂದು ನಿಜವಾಗಿಯೂ ನಮಗೆ ಗೊತ್ತಿಲ್ಲ. ಮನುಷ್ಯರ ರೀತಿಯಲ್ಲಿ ಆನೆಗೆ ಗರ್ಭಿಣಿ ಟೆಸ್ಟ್ ಮಾಡಲು ಯಾವುದೇ ವೈಜ್ಞಾನಿಕ ವಿಧಾನಗಳು ಇಲ್ಲ ಎಂದು ಡಿಸಿಎಫ್ ಕರಿಕಾಳನ್ "ಈಟಿವಿ ಭಾರತ"ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ರಾತ್ರಿ ರಾಂಪುರ ಆನೆ ಶಿಬಿರದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ ಲಕ್ಷ್ಮಿ ಆನೆ ಗಂಡು ಮರಿಗೆ ಜನ್ಮ ನೀಡಿದ್ದು, ಇದೊಂದು ಸಂತೋಷದ ವಿಚಾರ. "ನಾವು ಆನೆ ಶಿಬಿರಕ್ಕೆ ಆನೆಗಳನ್ನು ಪರೀಕ್ಷಿಸಲು ಹೋದಾಗ ಈ ಆನೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ಹಾಗಾಗಿ ದಸರಾದಲ್ಲಿ ಭಾಗವಹಿಸಲು ಈ ಆನೆಯನ್ನು ಆಯ್ಕೆ ಮಾಡಿದ್ದೆವು. ಅಂದು ಸಾಮನ್ಯ ಆನೆಗಳಂತೆ ಲಕ್ಷ್ಮಿ ಆನೆಯ ಚಲನವಲನವಿತ್ತು. ಆದರೆ ನೆನ್ನೆ ಮಧ್ಯಾಹ್ನ ಈ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡಿತು. ಕೂಡಲೇ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ಕೂಡಲೇ ಕೆಲವು ಟೆಸ್ಟ್ ಸ್ಯಾಂಪಲ್​​ಗಳನ್ನು ಹೈದರಾಬಾದ್​​ಗೆ ಕಳುಹಿಸಲಾಯಿತು. ಆದರೆ ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಆರೋಗ್ಯವಾಗಿವೆ" ಎಂದು ಮಾಹಿತಿ ನೀಡಿದರು.

Laxmi elephant
ಗಂಡು ಮರಿಗೆ ಜನ್ಮ ನೀಡಿದ ಲಕ್ಷ್ಮಿ ಆನೆ

ಈ ಬಗ್ಗೆ ರಾಜಮಾತೆ ಪ್ರಮೋದ ದೇವಿ ತುಂಬಾ ಸಂತೋಷ ಪಟ್ಟಿದ್ದಾರೆ. ತಾಯಿ ಮತ್ತು ಮರಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ ಎಷ್ಟು ದಿನ ಬೇಕೋ ಅಷ್ಟು ದಿನ ಅರಮನೆಯಲ್ಲಿ ಇಟ್ಟುಕೊಳ್ಳಿ. ಅದಕ್ಕೆ ನಮ್ಮ ಸಹಕಾರವಿರುತ್ತದೆ ಎಂದು ಹೇಳಿದ್ದಾರೆ ಎಂದು ಕರಿಕಾಳನ್ ತಿಳಿಸಿದರು.

ಡಿಸಿಎಫ್ ಕರಿಕಾಳನ್ ಸ್ಪಷ್ಟನೆ..

ಗರ್ಭಿಣಿ ಆನೆಯನ್ನು ತಾಲೀಮಿನಲ್ಲಿ ಕರೆದುಕೊಂಡು ಹೋಗಿದ್ದರಿಂದ ಜೊತೆಗೆ ಒಳ್ಳೆಯ ಆಹಾರ ನೀಡಿದ್ದರಿಂದ ಯಾವುದೇ ಕಷ್ಟ ಆಗದ ರೀತಿಯಲ್ಲಿ ಮರಿ ಜನನವಾಗಿದೆ. ಒಂದು ಆನೆ ಮರಿ ಹಾಕಲು ಸುಮಾರು 18 ರಿಂದ 20 ತಿಂಗಳು ಸಮಯ ಬೇಕು ಎಂದು ಡಿಸಿಎಫ್ ಕರಿಕಾಳನ್ ವಿವರಿಸಿದರು.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.