ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡರು. ಫೆ. 8ರಂದು ಮೊದಲ ಡೋಸ್ ಪಡೆದಿದ್ದು, ಇದೀಗ 28 ದಿನಗಳಾಗಿದ್ದು 2ನೇ ಡೋಸ್ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕೆಯನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಡೆದುಕೊಳ್ಳಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದರು. ಲಸಿಕೆ ತೆಗೆದುಕೊಂಡ ನನಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ. ಲಸಿಕೆ ಪಡೆದ ಕೆಲವೊಬ್ಬರಿಗೆ ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಲಸಿಕೆ ನೀಡುವವರೆ ಜ್ವರದ ಮಾತ್ರೆಯನ್ನು ಸಹ ಉಚಿತವಾಗಿ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದನ್ನು ಸದುಪಯೋಗ ಪಡಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಇದನ್ನೂ ಓದಿ:ಮೈಸೂರು ವಿವಿಯಲ್ಲಿ ಎಸ್.ಪಿ.ಬಿ. ಪೀಠ ಸ್ಥಾಪಿಸಲು ಸರ್ಕಾರಕ್ಕೆ ಪತ್ರ: ಕುಲಪತಿ ಪ್ರೊ.ಹೇಮಂತ್ ಕುಮಾರ್
ಹೊಸದಾಗಿ ಬಂದಾಗ ಭಯವಾಗುವುದು ಸಾಮಾನ್ಯ. ಪ್ರಧಾನಮಂತ್ರಿಯವರಿಂದ ಹಿಡಿದು ಪೌರಕಾರ್ಮಿಕರವರೆಗೂ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದು ಅದರ ಉಪಯೋಗ ಪಡೆದುಕೊಳ್ಳಿ. ಲಸಿಕೆಯನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಲಸಿಕಾ ಕೇಂದ್ರಗಳನ್ನು ಸಹ ಹೆಚ್ಚಾಗಿ ತೆರೆಯಲಾಗುತ್ತಿದ್ದು, ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕುಟುಂಬದವರಿಗೂ ಲಸಿಕೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಾಯಿ ಶ್ರೀಲಕ್ಷ್ಮಿ ರೆಡ್ಡಿ, ತಂದೆ ಜೈಪಾಲ ರೆಡ್ಡಿ ಹಾಗೂ ಮಾವ ನಾರಾಯಣ ರೆಡ್ಡಿ ಅವರು ಮೊದಲನೇ ಡೋಸ್ ಲಸಿಕೆ ಪಡೆದುಕೊಂಡರು. 2ನೇ ಡೋಸ್ ಲಸಿಕೆ ಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.