ಮೈಸೂರು: ಪ್ರವಾಸಿಗರು ಹಾಗೂ ಸಾರ್ವಜನಿಕರ ಮನವಿ ಮೇರೆಗೆ ದಸರಾ ದೀಪಾಲಂಕಾರವನ್ನು ಸಂಜೆ 6:30 ರಿಂದ ರಾತ್ರಿ 11:30 ರವರೆಗೆ ವಿಸ್ತರಿಸಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ತಿಳಿಸಿದ್ದಾರೆ.
ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ದೀಪಾಲಂಕಾರವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪ್ರಾಯೋಜಕತ್ವದಲ್ಲಿ ವಿಶೇಷವಾಗಿ ಹಾಗೂ ವಿಭಿನ್ನವಾಗಿ 102 ಕಿ.ಮೀ ವರೆಗೆ ದೀಪಾಲಂಕಾರ ಮಾಡಲಾಗಿದೆ. 41 ವೃತ್ತಗಳಲ್ಲಿ ವಿಶಿಷ್ಟವಾಗಿ ಮಾಡಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಈ ಬಾರಿ ದೀಪಾಲಂಕಾರವನ್ನು 6:30 ರಿಂದ 9:30 ರವರೆಗೆ ಆಯೋಜಿಸಲಾಗಿತ್ತು. ಆದರೆ ಈ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿದ್ದು, 9:30ರ ಬಳಿಕವೂ ಸಹಸ್ರ ಜನರು ದೀಪಾಲಂಕಾರ ನೋಡಲು ಬರುತ್ತಿರುವ ಕಾರಣದಿಂದಾಗಿ ಸಮಯವನ್ನು 10:30 ರವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು 6:30 ರಿಂದ 11 ಗಂಟೆಯವರೆಗೆ ದೀಪಾಲಂಕಾರ ಇರಲಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಯವಿಭವ ಸ್ವಾಮಿ ಮನವಿ ಮಾಡಿದ್ದಾರೆ.