ಮೈಸೂರು : ಕಾಲಿಗೆ ಕಟ್ಟಲಾಗಿದ್ದ ಸರಪಳಿಯನ್ನು ಕಿತ್ತುಕೊಂಡಿರುವ ಅರಮನೆಯ ಜಮಿನಿ ಎಂಬ ಆನೆ ರಂಪಾಟ ನಡೆಸಿದೆ. ಪರಿಣಾಮ ಕೆಲಕಾಲ ಮಾವುತರೇ ಬೆಚ್ಚಿಬಿದ್ದಿದ್ದಾರೆ.
ಸರಪಳಿ ಕಿತ್ತುಕೊಂಡ ಹೆಣ್ಣಾನೆ ದಸರಾಗೆ ಬಂದಿರುವ ಆನೆಗಳಿಗೆ ಕೀಟಲೆ ಮಾಡಲು ಮುಂದಾಗಿ ಅತ್ತಿಂದಿತ್ತ ಓಡಾಡಿದೆ. ಇದರಿಂದ ಅರಮನೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಜಮಿನಿಯನ್ನ ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸ ಪಟ್ಟು ಸುಸ್ತಾದರು. ಕೊನೆಗೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ ಆನೆಗಳ ಮೂಲಕ ಜಮಿನಿ ಆಟಕ್ಕೆ ಅಂಕುಶ ಹಾಕಲಾಯಿತು.
ಓದಿ: ರಸ್ತೆ ದಾಟುವ ವೇಳೆ ಕಾರಿನಡಿ ಸಿಲುಕಿದರೂ ಬದುಕುಳಿದ ಬಾಲಕ.. ವಿಡಿಯೋ