ETV Bharat / state

ದಸರಾ - 2021: ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಗೆ ಸ್ವಾಗತ - ಗಜಪಯಣ

ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ವೀರನಹೊಸಳ್ಳಿಯಿಂದ ಇಂದು ಚಾಲನೆ ನೀಡಲಾಯಿತು.

ದಸರಾ-2021
ದಸರಾ-2021
author img

By

Published : Sep 13, 2021, 11:54 AM IST

Updated : Sep 13, 2021, 12:33 PM IST

ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ಇಂದು ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಗೆ ಸ್ವಾಗತ

ಅರಣ್ಯ ಇಲಾಖೆ ಹಾಗೂ ಹುಣಸೂರು ತಾಲೂಕು ಆಡಳಿತವು ವೀರನಹೊಸಳ್ಳಿಯ ನಾಗರಹೊಳೆ ಪಾರ್ಕಿನ ಹೆಬ್ಬಾಗಿಲ ಬಳಿ ಅಭಿಮನ್ಯು ನೇತೃತ್ವದ 7 ಆನೆಗಳಿಗೆ ಪೂರ್ಣ ಕುಂಭದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿ, ಸಂಸದರು ಹಾಗೂ ಸ್ಥಳೀಯ ಶಾಸಕರಾದ ಹೆಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಗಣ್ಯರು ಗಜಪಡೆಗೆ ಪೂಜೆ ಸಲ್ಲಿಸಿದರು.

ಗೋಪಾಲಸ್ವಾಮಿ, ಕಾವೇರಿ, ಧನಂಜಯ, ಅಶ್ವತ್ಥಾಮ, ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ದಸರಾದಲ್ಲಿ ಭಾಗವಹಿಸಲಿವೆ. ಈ ಬಾರಿ ಅಭಿಮನ್ಯು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ, ಅಲಂಕೃತವಾದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.

ಸಾಂಪ್ರದಾಯಿಕ ಪೂಜೆ ಮೂಲಕ ಗಜಪಡೆಗೆ ಸ್ವಾಗತ

ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸುತ್ತಿರುವ ಸಾಂಸ್ಕೃತಿಕ ರಾಯಭಾರಿಗಳಾದ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ತೈಲ, ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಮುಖಂಡರ ಎತ್ತಿನಗಾಡಿ ಚಲೋ

ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡು ಬೀಡಲಿದ್ದು, ಸೆಪ್ಟೆಂಬರ್ 16 ರಂದು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾಡಳಿತ ಆನೆಗಳನ್ನು ಬರಮಾಡಿಕೊಳ್ಳಲಿದೆ. ನಂತರ ತಾಲೀಮು ಆರಂಭವಾಗಲಿದೆ. ವಿಕ್ರಮ‌ ಆನೆ ನೇರವಾಗಿ ಅರಣ್ಯಭವನಕ್ಕೆ ಆಗಮಿಸಲಿದೆ.

Last Updated : Sep 13, 2021, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.