ಮೈಸೂರು : ಕೋವಿಡ್ ಕೇರ್ ಸೆಂಟರ್ನಲ್ಲಿ ಡಿ ಬಾಸ್ ದರ್ಶನ್ ಸಾಂಗ್ಗೆ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರು ತಾಲೂಕಿನ ವರಕೋಡು ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಆರೈಕೆ ಕೆಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಯು ಸೋಂಕಿತರಲ್ಲಿ ಮಾನಸಿಕವಾಗಿ ಚೇತರಿಕೆ ತರುವ ಸಲುವಾಗಿ ನೃತ್ಯ ಮಾಡಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಲಾಕ್ಡೌನ್: ಮದ್ಯ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು!
ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ 'ಕಣ್ಣು ಹೊಡಿಯಾಕ್ ಮೊನ್ನೆ ಕಲ್ತೀನಿ' ಹಾಡಿಗೆ ಕೋವಿಡ್ ಆರೈಕೆ ಕೇಂದ್ರದ ಸೋಂಕಿತರು ಸಖತ್ ಸ್ಟೆಪ್ ಹಾಕಿದರು. ಆತ್ಮವಿಶ್ವಾಸ ತುಂಬಲು ಡ್ಯಾನ್ಸ್ ಮೊರೆ ಹೋದ ಸಿಬ್ಬಂದಿಯೊಂದಿಗೆ, ಉತ್ಸಾಹ ಭರಿತವಾಗಿ ಸೋಂಕಿತರು ಹೆಜ್ಜೆ ಹಾಕಿದರು.