ETV Bharat / state

ರಾಜಕಾರಣ ಮಾಡಲಷ್ಟೇ ದಲಿತ ಸಿಎಂ ಚರ್ಚೆ.. ಯಾವ ಪಕ್ಷಕ್ಕೂ ಆ ಬಗ್ಗೆ ಬದ್ಧತೆ ಇಲ್ಲ.. ಸಚಿವ ನಾರಾಯಣಸ್ವಾಮಿ - Dalit CM name use for just politics says Union Minister

ಜೆಡಿಎಸ್ ಇದೀಗ ದಲಿತ ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಿದೆ. ಆದರೆ, ದಲಿತ ರಾಜ್ಯಾಧ್ಯಕ್ಷನನ್ನೇ ಕಿತ್ತೊಗೆದಿದ್ದಾರೆ. ಇದು ಕೇವಲ ಚರ್ಚೆಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇವರಾರಿಗೂ ದಲಿತರನ್ನು ಸಿಎಂ ಮಾಡುವ ಆಸಕ್ತಿ ಇಲ್ಲ ಎಂದು ಎ.ನಾರಾಯಣಸ್ವಾಮಿ ಖೇದ ವ್ಯಕ್ತಪಡಿಸಿದರು..

A.Narayanaswamy Union Minister of State for Social Justice and Empowermen
ಕೇಂದ್ರ ಸಾಮಾಜಿಕ‌‌ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ
author img

By

Published : May 4, 2022, 2:10 PM IST

ಮೈಸೂರು : ದಲಿತರನ್ನು ಮುಖ್ಯಮಂತ್ರಿ ಮಾಡುವುದು, ಕೇವಲ ರಾಜಕಾರಣ ಮಾಡಲು ಮಾತ್ರ ಚರ್ಚೆ ಆಗುತ್ತಿದೆ. ಚುನಾವಣೆ ಸಮೀಪ ಬಂದಾಗ ದಲಿತ ಮುಖ್ಯಮಂತ್ರಿ ಹೆಸರು, ಆಮೇಲೆ ಮರೆಯುತ್ತಾರೆ ಎಂದು ಕೇಂದ್ರ ಸಾಮಾಜಿಕ‌‌ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಬೇಸರ ಹೊರ ಹಾಕಿದರು.

ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಕಾಂಗ್ರೆಸ್‌ಗೆ ದಲಿತ ಸಿಎಂ ಮಾಡುವ ಅವಕಾಶ ಇತ್ತು. ಹಿರಿಯ ನಾಯಕರಾದರೂ ಮಲ್ಲಿಕಾರ್ಜುನ್ ಖರ್ಗೆ ಅವರನ್ನೂ ಸಿಎಂ ಮಾಡಲಿಲ್ಲ. ನಂತರ ಡಾ.ಜಿ.ಪರಮೇಶ್ವರ ಸಿಎಂ ಆಗಲು ಅರ್ಹರಾಗಿದ್ದರು. ಆದರೆ, ಪಿತೂರಿ ಮಾಡಿ ಸೋಲಿಸಿದ್ದೂ ಕೂಡ ಕಾಂಗ್ರೆಸ್​ನವರೇ ಎಂದರು.

ಕೇಂದ್ರ ಸಾಮಾಜಿಕ‌‌ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ..

ಜೆಡಿಎಸ್ ಇದೀಗ ದಲಿತ ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಿದೆ. ಆದರೆ, ದಲಿತ ರಾಜ್ಯಾಧ್ಯಕ್ಷನನ್ನೇ ಕಿತ್ತೊಗೆದಿದ್ದಾರೆ. ಇದು ಕೇವಲ ಚರ್ಚೆಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇವರಾರಿಗೂ ದಲಿತರನ್ನು ಸಿಎಂ ಮಾಡುವ ಆಸಕ್ತಿ ಇಲ್ಲ ಎಂದರು.

ಕುಟುಂಬ ಸಮೇತ ಮೃಗಾಲಯಕ್ಕೆ ಭೇಟಿ : ಇಲ್ಲಿನ ಮೃಗಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಚಿವ ನಾರಾಯಣಸ್ವಾಮಿ,‌ ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸಿ ಪ್ರಾಣಿಗಳ ವೀಕ್ಷಣೆ‌ ಮಾಡಿದರು. ಇದೇ ವೇಳೆ ಚಿತ್ರದುರ್ಗದ ಮೃಗಾಲಯ ಅಭಿವೃದ್ಧಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅಲ್ಲಿನ ಮೃಗಾಲಯಕ್ಕೆ ಮೈಸೂರು ಮೃಗಾಲಯದಿಂದ ಜಿರಾಫೆ ತೆಗೆದುಕೊಂಡು ಹೋಗುವ ಚಿಂತನೆ ಇದೆ ಎಂದು ಹೇಳಿದರು.

ಇದನ್ನೂ ಓದಿ: ಸಭಾಪತಿಗೆ ಬಿಜೆಪಿ ಬಿಸಿ ಹೊ'ರೊಟ್ಟಿ'.. ವಾಯವ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್‌ ತಪ್ಪುವುದೆಂದು ಲಿಂಬಿಕಾಯಿ ಹುಳಿ ಹುಳಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.