ETV Bharat / state

ಸೈಬರ್ ಅಪರಾಧ: ಜಾಗೃತಿ ಮೂಡಿಸಲು ಮೈಸೂರು ಸೈಬರ್ ಕ್ರೈಂ ನಿಂದ ವಿನೂತನ ಪ್ರಯತ್ನ - Etv Bharat Kannada

ಸೈಬರ್ ಅಪರಾಧದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಹಯೋಗದೊಂದಿಗೆ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಸೈಬರ್ ತಿಳಿವಳಿಕೆ ಮಳಿಗೆಯನ್ನು ತೆಗೆಯಲಾಗಿದೆ.

KN_MYS_0
ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ
author img

By

Published : Oct 10, 2022, 7:00 PM IST

Updated : Oct 10, 2022, 7:07 PM IST

ಮೈಸೂರು: ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ನೀಡಲು ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಹಯೋಗದೊಂದಿಗೆ ಎಕ್ಸಿಬಿಷನ್​ ಗ್ರೌಂಡ್​ನಲ್ಲಿ ಸೈಬರ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಮಳಿಗೆಯೊಂದನ್ನು ತೆರೆಯಲಾಗಿದ್ದು, ಅಲ್ಲಿ ಭೇಟಿ ನೀಡಿದರೆ ಸೈಬರ್ ಅಪರಾಧ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ಸೈಬರ್ ಅಪರಾಧದ ಜಾಗೃತಿ ಮಳಿಗೆ ಆರಂಭ

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ಎಂಬ ಬಗ್ಗೆ ಜನರು ಯಾವ ರೀತಿ ಜಾಗೃತರಾಗಿರಬೇಕು ಎಂಬ ಬಗ್ಗೆ ವಿಡಿಯೋ ಮೂಲಕ ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಜಾಗೃತಿ ವಿಡಿಯೋಗಳ ತುಣುಕನ್ನು ಇಡಲಾಗಿದ್ದು, ಆ ಮೂಲಕ ಸ್ಕ್ಯಾನ್ ಮಾಡಿ ಆ ವಿಡಿಯೋಗಳನ್ನು ನೋಡಬಹುದು.

ಇದರಲ್ಲಿ ಒಟಿಪಿ, ಉದ್ಯೋಗ, ಆನ್​​​ಲೈನ್​ ಜಾಹೀರಾತು ಇನ್ನಿತರ ವಿಚಾರದಲ್ಲಿ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸೈಬರ್ ತಿಳಿವಳಿಕೆ ಮಳಿಗೆಯನ್ನು ತೆರೆಯಲಾಗಿದೆ. ಮತ್ತು ಈ ಮಳಿಗೆ ಪ್ರಾರಂಭದ ಉದ್ದೇಶ ಸೈಬರ್ ಕ್ರೈಂ ಬಗ್ಗೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ವಿವರಿಸಿದ್ದಾರೆ.

ಇದನ್ನೂ ಓದಿ: ದುಬೈಗೆ ಹೋಗಬೇಕೆಂದಿದ್ದ ವ್ಯಕ್ತಿ.. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರಿಗೆ ಮೆಣಸಿನಪುಡಿ ಎರಚಿದ.. ಯಾಕೆ?

Last Updated : Oct 10, 2022, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.