ಮೈಸೂರು: ಈ ಬಾರಿ ನಿರೀಕ್ಷೆಯಂತೆ ಮುಂಗಾರು ಆರಂಭವಾಗದ ಹಿನ್ನೆಲೆಯಲ್ಲಿ ಮಳೆ ನಂಬಿ ಬಿತ್ತಿದ್ದ ಬೆಳೆ ನಾಶವಾಗಿ ಅನ್ನದಾತರು ಕಂಗಾಲಾಗಿದ್ದಾರೆ.
ನಂಜನಗೂಡು ತಾಲೂಕಿನ ಹಾಡ್ಯಹುಂಡಿ ಗ್ರಾಮದ ಮಹೇಶ್ ಎಂಬ ರೈತ ಮುಂಗಾರು ಮಳೆ ನಂಬಿ 5 ಎಕರೆ ಜಮೀನನಲ್ಲಿ ಹಸಿರು ಕಾಳು ಬಿತ್ತನೆ ಮಾಡಿದ್ದರು. ಆದರೆ, ವಾಡಿಕೆಯಂತೆ ಮಳೆ ಬಾರದೇ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. 50 ಸಾವಿರ ರೂ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತ ಮಹೇಶ್ ಇದೀಗ ಕಂಗಾಲಾಗಿದ್ದಾರೆ.
ಸಾಲ ತೀರಿಸುವಂತೆ ಬ್ಯಾಂಕುಗಳಿಂದ ನೋಟಿಸ್ ಬರುತ್ತಿದ್ದು, ಬೆಳೆ ನಷ್ಟ ಹಾಗೂ ಸಾಲದ ಹೊರಯಿಂದ ಕೃಷಿಕ ಆತಂಕಗೊಂಡಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗೆಯಾದರೆ, ಅನ್ನದಾತರು ಬದುಕುವುದು ಹೇಗೆ ಎನ್ನುತ್ತಾರೆ ನೊಂದ ರೈತ ಮಹೇಶ್.