ಮೈಸೂರು: ಹುಲಿ ದಾಳಿಗೆ ಹಸುವೊಂದು ಬಲಿಯಾಗಿದ್ದು, ಮತ್ತೊಂದು ಹಸು ಗಾಯಗೊಂಡಿರುವ ಘಟನೆ ಸರಗೂರು ಬಳಿಯ ಹೆಗ್ಗನೂರು ಗ್ರಾಮದಲ್ಲಿ ನಡೆದಿದೆ.
ಸರಗೂರು ತಾಲೂಕಿನ ಎನ್. ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಹುಲಿಯೊಂದು ಕಳೆದ 10 ದಿನಗಳಿಂದ ಗ್ರಾಮದ ಸಮೀಪ ಬಂದು ಹಸುಗಳ ಮೇಲೆ ದಾಳಿ ನಡೆಸುತ್ತಿತ್ತು. ನಿನ್ನೆ ರಾತ್ರಿ ಹೆಗ್ಗನೂರು ಗ್ರಾಮದ ಮಹದೇವೇಗೌಡ ಎಂಬುವರ ಹಸು ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಈ ವೇಳೆ ಮತ್ತೊಂದು ಹಸುವನ್ನು ಗಾಯಗೊಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಈ ಕುರಿತು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿ ಸೆರೆಗೆ ಕ್ರಮ ಕೈಗೊಂಡಿದ್ದಾರೆ.