ಮೈಸೂರು : ಕೊರೊನಾ ಮೊದಲನೇ ಅಲೆಯಿಂದ ತತ್ತರಿಸಿ ಚೇತರಿಸಿಕೊಳ್ಳುತ್ತಿದ್ದ ಪ್ರತಿಯೊಬ್ಬರಿಗೂ ಪ್ರತೀ ಕ್ಷೇತ್ರಗಳಿಗೂ ಇದೀಗ ಕೋವಿಡ್ 2ನೇ ಅಲೆ ಶಾಕ್ ನೀಡಿದೆ. ಕೋವಿಡ್ ಎರಡನೇ ಅಲೆ ಕ್ಯಾಬ್ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಇದ್ದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರೀಗ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಈ ಕುರಿತು ಕ್ಯಾಬ್ ಮಾಲೀಕರು ತಮ್ಮ ಅಳಲನ್ನು ಹೊರ ಹಾಕಿದ್ದಾರೆ.
ಕೋವಿಡ್ ಹಿನ್ನೆಲೆ ಸಾರ್ವಜನಿಕರು ಹೊರ ಬರುವುದು ಕಡಿಮೆಯಾಗಿದೆ. ಹಾಗಾಗಿ, ಕ್ಯಾಬ್ಗಳನ್ನು ಬುಕ್ ಮಾಡುತ್ತಿಲ್ಲ. ಪರಿಣಾಮ ಬಾಡಿಗೆ ಇಲ್ಲದೇ ಕ್ಯಾಬ್ ಮಾಲೀಕರು ಹಾಗೂ ಡ್ರೈವರ್‌ಗಳ ಪಾಡು ಹೇಳತೀರದಾಗಿದೆ.
ತಿಂಗಳಿಗೊಮ್ಮೆ ಟ್ಯಾಕ್ಸ್ ಕಟ್ಟಬೇಕು, ವರ್ಷಕ್ಕೊಮ್ಮೆ ಇನ್ಸೂರೆನ್ಸ್ ಕಟ್ಟಬೇಕು, ಸಾಲದೆಂಬಂತೆ ಪೆಟ್ರೋಲ್-ಡಿಸೇಲ್ ಬೆಲೆ ಕೂಡ ಎಗ್ಗಿಲ್ಲದಂತೆ ಏರಿಕೆ ಕಂಡಿದೆ. ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಸಹ ಕಡಿಮೆಯಾಗಿದೆ. ಕೇರಳ ಮತ್ತು ತಮಿಳುನಾಡಿನಿಂದ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದರು. ಆದ್ರೆ, ಕೋವಿಡ್ನಿಂದ ಅವರೂ ಸಹ ಬರುತ್ತಿಲ್ಲ.
ಇದನ್ನೂ ಓದಿ: ವಾಣಿಜ್ಯ ನಗರಿಯಲ್ಲಿ ಕ್ರೀಡಾಂಗಣಗಳ ಕೊರತೆ!
ಪ್ರತಿ ದಿನ 500 ರೂ. ಆದಾಯ ಬಂದರೂ ಹೆಚ್ಚು. ಇದರಲ್ಲಿ ಜೀವನ ನಿರ್ವಹಣೆ ಕಷ್ಟ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆಯಾಗಿದೆ. ಬಾಡಿಗೆಯೂ ಸಹ ಸಿಗುತ್ತಿಲ್ಲ ಎಂದು ಕ್ಯಾಬ್ ಮಾಲೀಕ ಅಲ್ತಾಫ್ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.